ಚಳ್ಳಕೆರೆ : ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಬಡವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಸರಕಾರ ಸಮ್ಮಿತಿ ನೀಡಿದೆ ಅದನ್ನು ವಿತರಣೆ ಮಾಡಬೇಕಾದ ಗ್ರಾಮೀಣ ಭಾಗದ ಏಜೆನ್ಸಿಗಳು ಮಾತ್ರ ಮೀನಾಮೇಷ ಮಾಡುತ್ತಿವೆ
ಹೌದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಪ್ರತಿನಿತ್ಯ ನ್ಯಾಯಬೆಲೆ ಅಂಗಡಿ ಮುಂದೆ ಪಡಿತರ ಅಕ್ಕಿ ಪಡೆಯಲು ಸಾರ್ವಜನಿಕರು ಬೆಳಗಿನ ಜಾವ ಮೂರು ಗಂಟೆಯಿAದ ಸರದಿ ಸಾಲಿನಲ್ಲಿ ನಿಂತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಬುಡಕಟ್ಟು ಜನಾಂಗದವರೆ ಹೆಚ್ಚು ಇರುವ ನನ್ನಿವಾಳ ಭಾಗದಲ್ಲಿ ಸರಕಾರ ನೀಡುವ ಅಕ್ಕಿಯನ್ನೆ ನಂಬಿಕೊAಡು ಜೀವನ ಸಾಗಿಸುತ್ತಾರೆ ಆದರೆ ನ್ಯಾಯಬೆಲೆ ಅಂಗಡಿ ಮಾಲಿಕರು ಹಾಗೂ ಅಧಿಕಾರಿಗಳು ತಮಗೆ ಇಷ್ಟಬಂದAತೆ ಅಕ್ಕಿ ನೀಡುವುದು ಬಡವರ ಹೊಟ್ಟೆ ಮೇಲೆ ಚೆಲ್ಲಾಟ ವಾಡುತ್ತಿದ್ದಾರೆ ಎಂದು ರ್ಸಾಜನಿಕರು ಕಿಡಿಕಾರಿದ್ದಾರೆ.
ರೇಷನ್ ಪಡೆಯಲು ಬಂದ ಮಹಿಳೆಯರು ಅಧಿಕಾರಿಗಳನ್ನು ಮಾಲೀಕರನ್ನು ಬೈಯ್ದುಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅದರಲ್ಲೂ ಮುಖ್ಯವಾಗಿ ನನ್ನಿವಾಳ ಗ್ರಾಮದಲ್ಲಿ ಬರುವ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಕೊಡದೆ ಸತಾಯಿಸುತ್ತಿರುವುದಕ್ಕೆ ಗ್ರಾಮಸ್ಥರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನಿವಾಳ ಗ್ರಾಮಸ್ಥರು ಮತ್ತು ಹೊರಗಿನ ಹಟ್ಟಿಯವರು ಮಂಗಳವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ನ್ಯಾಯ ಬೆಲೆ ಅಂಗಡಿ ಮುಂದೆ ಕಾದು ಕೂತಿರುತ್ತಾರೆ, ಆದರೆ ಸಂಬAಧ ಪಟ್ಟ ಕಾರ್ಯದರ್ಶಿಗಳು ಬೆಳಗ್ಗೆ ಹತ್ತು ಹತ್ತು ವರೆ ಸಮಯಕ್ಕೆ ಬರುತ್ತಾರೆ ಬಂದರೂ ಸಹ ಸರ್ವರ್ ಬಿಜಿ ಮತ್ತೆ ನಿಮ್ಮ ಹೆಬ್ಬೆಟ್ ಬರಲ್ಲ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಇನ್ನಿತರೆ ಉಡಾಪೆ ಉತ್ತರ ನೀಡುತ್ತಾ, ವಾಪಸ್ ಕಳಿಸುವುದು ರೂಢಿಗತವಾಗಿದೆ ಮತ್ತೆ ರೇಷನ್ ಕೊಡುವುದು ಕೆಲವೇ ಗಂಟೆ ಆಮೇಲೆ ತಾಲೂಕು ಆಫೀಸಿಗೆ ಹೋಗಬೇಕು ಫುಡ್ ಇನ್ಸ್ಪೆಕ್ಟರ್ ಕರೆದಿದ್ದಾರೆ ಎಂಬ ಉತ್ತರ ಹೇಳುತ್ತಾ ಬಾಗಿಲು ಹಾಕಿಕೊಂಡು ಹೋಗುವುದು ಇದರಿಂದ ದಿನಗೂಲಿ ಬಿಟ್ಟು ಇದನ್ನೇ ಕಾಯ್ತ ಕೂತವರಿಗೆ ತುಂಬಾ ನಷ್ಟವಾಗುತ್ತಿದೆ ಬೆಳಗಿನ ಜಾವ ಸುಮಾರು 3 ಗಂಟೆಯಿAದ ಕಾದು ಉಳಿತರೂ ಅಕ್ಕಿ ಸಿಗದೆ ಬರಿಗೈಯಲ್ಲಿ ಮನೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬAತೆ ಮನೆಗೆ ಮರಳಿ ಹೋಗಬೇಕಾದ ಅನಿವಾರ್ಯತೆ ಇದೆ ನ್ಯಾಯಬೆಲೆ ಅಂಗಡಿ ಮಾಲಿಕರ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಂಬAಧಪಟ್ಟ ಅಧಿಕಾರಿಗಳು ಪಡಿತರ ಚೀಟಿದಾರರಿಗೆ ಪಡಿತರ ಅಕ್ಕಿ ಸಮಯಕ್ಕೆ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುವತೇ ಕಾದು ನೋಡಬೇಕಿದೆ.