ಚಳ್ಳಕೆರೆ : ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತ ಮಹಿಳೆ ಎಂಬ ಕಾರಣಕ್ಕೆ ತಳಕು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಲು ಕೆಲ ಸದಸ್ಯರು ಸಭೆಗಳಿಗೆ ಹಾಜರಾಗದೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಳಕು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಆರೋಪಿಸಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷರು, ಸದಸ್ಯರು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ತಳಕು ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ಹಲವು ಅನೂಕೂಲಕರವಾದ ಉದ್ಯೋಗ ಖಾತ್ರಿ ಯೋಜನೆ, ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗು ಕೆಲವು ಚುನಾಯಿತ ಸದಸ್ಯರುಗಳು ಶ್ರಮಿಸುತ್ತಿದ್ದಾರೆ, ಆದರೆ ಕೆಲ ಸದಸ್ಯರುಗಳು ಮಾತ್ರ ದಲಿತ ಮಹಿಳೆ ಎಂಬ ಕಾರಣಕ್ಕೋ ಅಥವಾ ಇನ್ನಾವುದ್ಯೋ ಕಾರಣಕ್ಕೋ ಸುಖಾ ಸುಮ್ಮನೆ ಅನುಮತಿ ಪಡೆಯದೆ ಸಭೆಗೆ ಗೈರಾಗುವುದು ಸಾರ್ವಜನಿಕರ ಮೂಲಭೂತ ಕೆಲಸಗಳಿಗೆ ಸಮ್ಮತಿ ನೀಡದೆ ಇರುವುದು, ಪಿಡಿಓಗಳ ಬದಲಾಸುವುದು ಈಗೇ ಗ್ರಾಪಂ ಪಂಚಾಯಿತಿಯಲ್ಲಿ ಅಭಿವೃದ್ದಿಗೆ ಕುಂಠಿತವಾಗುವAತೆ ಕೆಲ ಸದಸ್ಯರು ಸಂಚು ರೂಪಿಸುತ್ತಿದ್ದಾರೆ.
ಇನ್ನೂ ಸರಕಾರದ ಕಾನೂನು ವ್ಯಾಪ್ತಿಯಲ್ಲಿ ಸುಖಾ ಸುಮ್ಮನೆ ಮೂರು ಬಾರಿ ಸಾಮಾನ್ಯ ಸಭೆಗೆ ಗೈರಾದರೆ ಅಂತವರ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು ಎಂಬುದು ನಿಯಮವಿದೆ, ಗ್ರಾಮದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಉದ್ಯೋಗ ನೀಡುವಂತಹ ಕಾರ್ಯದಲ್ಲಿ ಕೆಲ ಸದಸ್ಯರು ಬೋಗಸ್ ಬಿಲ್ ಪಡೆಯಲು ಕಾಮಗಾರಿಗೆ ಅನುಮತಿ ನೀಡಿ ಎಂದು ನನ್ನ ಮೇಲೆ ಒತ್ತಡ ತರುತ್ತಾರೆ. ಇನ್ನೂ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಕಾರ್ಯಗಳಿಗೆ ತೊಂದರೆಯಾಗುವAತೆ ಪಿಡಿಓಗಳ ಬದಲಾವಣೆ ಇಗೇ ಅಭಿವೃದ್ದಿ ಕುಂಠಿತಕ್ಕೆ ಕೆಲವರು ನಿರತರವಾಗಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ, ತಳಕು ಗ್ರಾಮ ಪಂಚಾಯಿತಿ 5 ಹಳ್ಳಿಗಳಿಂದ ಕೂಡಿದ ಪಂಚಾಯಿತಿಗೆ 4 ರಿಂದ 5 ಮುಜರೆ ಗ್ರಾಮಗಳು ಸೇರಿ 25 ಗ್ರಾಮಗಳಿವೆ,ಇನ್ನೂ ಒಟ್ಟಾರೆ 23 ಸದಸ್ಯರನ್ನು ಒಳಗೊಂಡಿದೆ, ಇನ್ನೂ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಕುಂಠಿತವಾಗದAತೆ ಇಲ್ಲಿನ ಪಿಡಿಓಗಳು ಅಧ್ಯಕ್ಷರು ಕಾರ್ಯನಿರ್ವಹಿಸುತ್ತಿದ್ದಾರೆ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವಲ್ಲಿ ಗ್ರಾಪಂ.ಸದಾ ಮುಂದಿದೆ. ಆದರೆ ಕೆಲ ಸದಸ್ಯರು ಮಾತ್ರ ಆರೋಪ ಮಾಡುವುದು ಸರಿಯಲ್ಲ ಇದರಿಂದ ಅಭಿವೃದ್ದಿಗೆ ಕುಂಠಿತವಾಗುತ್ತದೆ ತಮ್ಮ ಸ್ವ-ಹಿತಾಸಕ್ತಿ ಬದಿಗೊತ್ತಿ ಸಾರ್ವಜನಿಕರ ಸೇವೆಗೆ ಮುಂದಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ಅಧ್ಯಕ್ಷೆ ದ್ರಾಕ್ಷಾಯಿಣಿ, ಉಪಾಧ್ಯಕ್ಷೆ ಉಮಾಕುಮಾರ್, ಸದಸ್ಯರಾದ ರವಿಚಂದ್ರ, ನೀಲಮ್ಮ, ಶಮಿನ್‌ಖಾನ್, ತಿಪ್ಪೆಸ್ವಾಮಿ, ನಾಗರಾಜ್, ಓಬಮ್ಮ, ಗಿರಿಜಮ್ಮ, ಭಾಗ್ಯಮ್ಮ, ಚಂದ್ರಣ್ಣ, ಚನ್ನಪ್ಪ, ಗೌರಮ್ಮ ಹಾಗೂ ಇತರ ಸದಸ್ಯರು ಮುಖಂಡರು ಹಾಜರಿದ್ದರು.

About The Author

Namma Challakere Local News
error: Content is protected !!