ಚಳ್ಳಕೆರೆ : ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಇಂದು ಜಿಲ್ಲಾಧಿಕಾರಿಗಳ ತಂಡ ಚಳ್ಳಕೆರೆ ತಾಲೂಕಿನ ಹಲವು ಶಾಲೆಗಳಿಗೆ ಹಾಗೂ ಹಲವು ಸ್ಥಳಗಳಿಗೆ ಬೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಇನ್ನೂ ತಾಲೂಕಿಗೆ ಆಗಮಿಸಿದ ಜಿಲ್ಲಾಧಿಕಾರಿ ಜಿಆರ್ ಜೆ.ದಿವ್ಯಪ್ರಭು ಹಾಗೂ ಜಿಲ್ಲೆಗೆ ಚುನಾವಣೆ ಪರಿವೀಕ್ಷಕರಾಗಿ ಆಗಮಿಸಿದ ಡಾ. ಶಮ್ಲಾ ಇಕ್ಬಾಲ್ , ತಂಡ ನಗರದ ಗಾಂಧಿನಗರದ ಶಾರದ ಶಾಲೆಯ ಮತಗಟ್ಟೆಗೆ ತೆರಳಿ ಮತಗಟ್ಟೆ ಅಧಿಕಾರಿಗಳ ಸ್ಥಾನದಲ್ಲಿ ಕುಳಿತು ಮತಪಟ್ಟಿಯನ್ನು ವೀಕ್ಷಿಸಿದರು.
ಇನ್ನೂ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿ, ಅರ್ಹರಿರುವವರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಸೀಬಾರ, ಚಳ್ಳಕೆರೆ ತಾಲ್ಲೂಕು ಎನ್. ಮಹದೇವಪುರ, ಚಳ್ಳಕೆರೆ ನಗರದ ಗಾಂಧಿನಗರದಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡಿದರು.
ಸಾರ್ವಜನಿಕರೊಂದಿಗೆ ಮಾತನಾಡಿದ ಡಾ. ಶಮ್ಲಾ ಅವರು ಅರ್ಹರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಹಕಾರ ನೀಡಬೇಕು, ಅಲ್ಲದೆ ಬೇರೆಡೆ ವಲಸೆ ಹೋಗಿರುವವರನ್ನು ಸಂಪರ್ಕಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಮಾಹಿತಿ ನೀಡಿ, ಅವರಲ್ಲಿ ಯಾರಾದರೂ ಅರ್ಹರಿದ್ದಲ್ಲಿ, ಅಂತಹವರನ್ನು ಮತದಾರರ ಪಟ್ಟಿಗೆ ಸೇರಿಸಲು ಯತ್ನಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಉಪವಿಭಾಗಾಧಿಕಾರಿ ಎಂ. ಕಾರ್ತಿಕ್, ತಹಸಿಲ್ದಾರ್‍ಗಳು, ಸಂಬಂಧಪಟ್ಟ ಮತಗಟ್ಟೆಗಳ ಬಿಎಲ್‍ಒ ಗಳು ಈ ಸಂದರ್ಭದಲ್ಲಿ ಇದ್ದರು.