ಚಳ್ಳಕೆರೆ : ಬಯಲು ಸೀಮೆಯಲ್ಲಿ ಗಾಂಜಾ ಘಾಟು ಹೆಚ್ಚಾಗುತ್ತಿದಂತೆ ಅಬಕಾರಿ ಇಲಾಖೆ ಕಾರ್ಯಪ್ರವೃತ್ತರಾಗಿ ಮಿಂಚಿನ ಕಾರ್ಯಚರಣೆ ನಡೆಸಿ ಓರ್ವ ವ್ಯಕ್ತಿ ಹಾಗು ಮಾಲು ಸಮೆತ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಉಪ ಆಯುಕ್ತರು, ಚಿತ್ರದರ್ಗ ಜಿಲ್ಲೆ, ಚಿತ್ರದರ್ಗ ರವರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಹಿರಿಯೂರು, ಉಪ ವಿಭಾಗ ಹಿರಿಯೂರು ರವರ ಮಾರ್ಗದರ್ಶನದಲ್ಲಿ ಇಂದು ಚಳ್ಳಕೆರೆ ತಾಲ್ಲೂಕಿನ ಮಲ್ಲೂರಹಳ್ಳಿರಯಿಂದ ಅಬ್ಬೇನಹಳ್ಳಿಗೆ ಹೋಗುವ ರಸ್ತೆಯಲ್ಲಿ ಮಾರಮ್ಮನಗುಡಿ ಮುಂಭಾಗದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಮಲ್ಲೂರಹಳ್ಳಿ ಕಡೆಯಿಂದ ಬಂದ ದ್ವಿಚಕ್ರ ವಾಹನ ತಪಾಸಣೆ ನಡೆಸಿದಾಗ

ಒಂದು ನೀಲಿ ಬಣ್ಣದ ತೆಳು ಬಟ್ಟೆ ಬ್ಯಾಗ್‌ ನಲ್ಲಿ ತೆನೆ ಹೂ ಕಾಂಡ ಬೀಜಗಳಿಂದ ಕೂಡಿದ ಒಣ ಗಾಂಜಾ ಇದ್ದು, ಪಂಚರ ಸಮಕ್ಷಮ ಸದರಿ ಮುದ್ದೆ, ಮಾಲನ್ನು ಪಂಚನಾಮೆ ಅಡಿಯಲ್ಲಿ ಜಪ್ತುಪಡಿಸಿ ತೂಕದ ಯಂತ್ರದ ಸಹಾಯದಿಂದ ತೂಕ ಮಾಡಿ ನೋಡಲಾಗಿ 475 ಗ್ರಾಂ ಒಣ ಗಾಂಜಾ ಇರುತ್ತದೆ.

ಆರೋಪಿ ಬೋಸಯ್ಯ (ಅಲಿಯಾಸ್ ವಿಠಲಸ್ವಾಮಿ) 32 ವರ್ಷ, ವೃತ್ತಿ-ಕೂಲಿ ಕೆಲಸ ನೇತ್ರನಹಳ್ಳಿ ಗ್ರಾಮ, ಮೊಳಕಾಲ್ಮೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರು

ಅಕ್ರಮವಾಗಿ 475 ಗ್ರಾಂ ಒಣ ಗಾಂಜಾ ಸ್ವಾಧೀನ ಹೊಂದಿರುವುದರಿಂದ, ಆರೋಪಿಯನ್ನು ದಸ್ತಗಿರಿ ಮಾಡಿ

ಸೆಕ್ಷನ್ 20(ii)(B) ಮತ್ತು 25 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಸ್ಥಳ ಮಹಜರ್ ಕ್ರಮ ಜರುಗಿಸಿ ದೊರೆತ ಒಣಗಾಂಜಾವನ್ನು ಮತ್ತು ಹೀರೋ ಸ್ಪ್ಲಂಡರ್‌ ಪ್ಲಸ್‌ ದ್ವಿಚಕ್ರ ವಾಹನ ಇಲಾಖಾ ವಶಕ್ಕೆ ಪಡೆದುಕೊಂಡು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಗಾಂಜಾ ಪ್ರಕರಣದ ಕಾರ್ಯಾಚರಣೆಯಲ್ಲಿ ಚಳ್ಳಕೆರೆ ವಲಯದ ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜು,ಅಬಕಾರಿ ಉಪ ನಿರೀಕ್ಷಕರಾದ ಟಿ.ರಂಗಸ್ವಾಮಿ,ಡಿ.ಟಿ.ತಿಪ್ಪಯ್ಯ ಹಾಗೂ ಕಾನ್ಸ್ಟೇಬಲ್ ಗಳಾದ ನಾಗರಾಜ್, ಸೋಮಶೇಖರ ಪಾಲ್ಗೊಂಡಿದ್ದರು.

ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಗಾಂಜಾ ಮತ್ತು ವಾಹನದ ಮೌಲ್ಯ ಒಟ್ಟು -1,20,000 ರೂಪಾಯಿಗಳು ಆಗಿರುತ್ತದೆ.

Namma Challakere Local News

You missed

error: Content is protected !!