ಚಳ್ಳಕೆರೆ ನ.16 ನವಂಬರ್ 17 ಶುಕ್ರವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ
66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ
ಮೂರನೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ
ಚಳ್ಳಕೆರೆಯಿಂದ ವಿದ್ಯುತ್ ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01 ಪಾವಗಡ ರಸ್ತೆ ಎಫ್-02
ಬೆಂಗಳೂರು: ರಸ್ತೆ ಎಫ್-03 ದುರ್ಗಾವರ ಎಫ್-04 ರೆಡ್ಡಿಹಳ್ಳಿ ಎಫ್-05 ಸಿದ್ದಾಪುರ ಎಫ್-06
ನನ್ನಿವಾಳ ಎಫ್-07 ಸೂಮಗುದ್ದು ರಸ್ತೆ ಎಫ್-08 ಬಳ್ಳಾರಿ ರಸ್ತೆ ಎಫ್-09 ಗಾಂಧಿನಗರ
ಎಫ್-11ವೀರದಿಮ್ಮನಹಳ್ಳಿ ಎನ್.ಜೆ.ವೈ, ಎಫ್-12 ಕುಡಿಯುವ ನೀರು 11ಕೆವಿ.ಮಾರ್ಗಗಳಲ್ಲಿ ಈ
ಕೆಳಕಂಡ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆವರೆಗೆ ವಿದ್ಯುತ್ ಸರಬರಾಜು
ಇರುವುದಿಲ್ಲ. ಆದ್ದರಿಂದ ತಾವುಗಳು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಚಳ್ಳಕೆರೆ ನಗರ ವ್ಯಾಪ್ತಿಯ ಪ್ರದೇಶಗಳು ಮತ್ತು ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ಹಾಗೂ ಬುಡ್ನಹಟ್ಟಿ
ಪಂಚಾಯ್ತಿ, ನಗರಂಗೆರೆ ಪಂಚಾಯ್ತಿ, ನನ್ನಿವಾಳ ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ
ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಯ ಇರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Namma Challakere Local News

You missed

error: Content is protected !!