ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಇದರಿಂದ ಅವರು ವಂಚಿತರಾಗಬಾರದು : ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್
ಚಳ್ಳಕೆರೆ : ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಇದರಿಂದ ಅವರು ವಂಚಿತರಾಗಬಾರದು, ಬಾಲಕಾರ್ಮಿಕರನ್ನು ಮುಖ್ಯವಾಹಿನಿಗೆ ತಂದು ಶಿಕ್ಷಣ ಕೊಡಿಸಬೇಕಾದದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಇಂತಹ ಅಪರಾಧಗಳಿಂದ ಕಾನೂನು ಉಲ್ಲಂಘನೆಯಾಗದAತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷತೆ ವಹಿಸಿಕೊಂಡ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ಹೇಳಿದರು.
ಅವರು ನಗರದ ಕ್ಷೇತ್ರ ಮಾದರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಂಡ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಶಿಕ್ಷಣ ಇಲಾಖೆ ಸಂಯುಕ್ತಶ್ರಾಯದಲ್ಲಿ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮಕ್ಕಳನ್ನು ಕುರಿತು ಕಾನೂನು ಅರಿವು ಕಾರ್ಯಗಾರದ ಸಂದೇಶವನ್ನು ಮಕ್ಕಳಿಗೆ ತಿಳಿಸಿದರು.
ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಕಾನೂನನ್ನು ಯಾರು ಪಾಲಿಸುತ್ತಾರೆ ಅವರ ಜೀವನ ಸುಂದರಾಗಿರುತ್ತದೆ, ಕಾನೂನನ್ನು ನಾವು ಪಾಲಿಸದರೆ ನಮ್ಮನ್ನು ಕಾನೂನು ಕಾಪಡುತ್ತದೆ ಆದ್ದರಿಂದ ನಮ್ಮ ಜೀವನದ ಪ್ರತಿ ಹಂತದಲ್ಲಿ ಕಾನೂನು ಹಾಸುಹೊಕ್ಕಾಗಿದೆ ಎಂದರು.
ಇನ್ನೂ ಈದೇ ಸಂಧರ್ಭದಲ್ಲಿ ಮುಖ್ಯ ಶಿಕ್ಷಕರಾದ ಜಕಣಚಾರಿ, ವಕೀಲರ ಸಂಘದ ಉಪಾಧ್ಯಕ್ಷ ಪಿ.ಪಾಲಯ್ಯ, ಎಂ.ಸಿದ್ದರಾಜು, ಡಿ.ಶಿಲ್ಪ, ಇತರ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.