ಎನ್ ದೇವರಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ

ಚಳ್ಳಕೆರೆ : ಎನ್. ದೇವರಹಳ್ಳಿ ಗ್ರಾಮದಲ್ಲಿ ಹೆಚ್ಚುವರಿಯಾಗಿ ಸಾರಿಗೆ ಬಸ್ ಕಲ್ಪಿಸುವಂತೆ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಚಳ್ಳಕೆರೆ ನಗರದ ಸಾರಿಗೆ ಬಸ್ ನಿಲ್ದಾಣದಿಂದ ಮುಂಜಾನೆ 6.40 ಗಂಟೆಗೆ ಹೊರಡು ಸಾರಿಗೆ ಬಸ್ ನೇರಲಗುಂಟೆ, ಭೀಮನಕರೆ, ಎನ್, ದೇವರಹಳ್ಳಿ, ಎನ್. ಗೌರಿಪುರದಿಂದ ನಾಯಕನಹಟ್ಟಿ ಮಾರ್ಗದಲ್ಲಿ ಸಂಚರಿಸಿ ಅಲ್ಲಿ ಓಬಯ್ಯನಹಟ್ಟಿಗೆ ಹೋಗಿ ಅದೇ ಮಾರ್ಗದಲ್ಲಿ ಹಿಂದುರುಗಿ ಎನ್. ದೇವರಹಳ್ಳಿ ಗ್ರಾಮಕ್ಕೆ ಬರುವಷ್ಟಿಗೆ ಸಾರಿಗೆ ಬಸ್ ಜನರಿಂದ ತುಂಬಿಹೋಗಿರುತ್ತಿದೆ. ಬಸ್ ಪಾಸ್ ವುಳ್ಳ ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಜಾಗವಿಲ್ಲದೆ, ಶಾಲಾ-ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ ಹೆಚ್ಚುವರಿಯಾಗಿ ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೊಶ ವ್ಯಕ್ತ ಪಡಿಸಿದ್ದಾರೆ.
ತಾಲೂಕಿನ ನಾಯಕನಹಟ್ಟಿ ಹೋಬಳಿಯ ಎನ್ ಮಹದೇವಪುರ, ಗೌರಿಪುರ, ಎನ್ ದೇವರಹಳ್ಳಿ, ಭೀಮನಕೆರೆ ಕಾರ್ತಿಕನಹಟ್ಟಿ ವಿದ್ಯಾರ್ಥಿಗಳು ಪ್ರತಿ ದಿನ ಶಾಲಾ-ಕಾಲೇಜಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದೆ ಬೈಕಿನಲ್ಲಿ ಆಟೋದಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಯಕನಹಟ್ಟಿ ಹೋಬಳಿಯ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಚಳ್ಳಕೆರೆ, ಚಿತ್ರದುರ್ಗ ನಗರದ ವಿವಿಧ ಶಾಲಾ-ಕಾಲೇಜುಗಳಿಗೆ ವಿದ್ಯಾಭ್ಯಾಸ ಮಾಡಲು ಹೊಗುತ್ತಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಗಳಿಲ್ಲ, ಇರುವುದು ಒಂದೇ ಸಾರಿಗೆ ಬಸ್ ಹಲವು ಗ್ರಾಮಗಳನ್ನು ಸುತ್ತಿಕೊಂಡು ಬರುವಷ್ಟರಲ್ಲಿ ಬಸ್ ಭರ್ತಿಯಾಗಿ ಹೋಗಿರುತ್ತಿದೆ. ಬಸ್ ಹತ್ತಲು ಜಾಗವಿರುವುದಿಲ್ಲ. ನಾವು ಹೇಗೆ ಶಾಲೆಗಳಿಗೆ ಹೋಗಬೇಕು. ವಿದ್ಯಾರ್ಥಿಗಳ ಸಮಸ್ಯೆ ಹರಿತು ಜನಪ್ರತಿನಿಧಿಗಳು, ಸಂಬAಧಪಟ್ಟ ಅಧಿಕಾರಿಗಳು ಹೆಚ್ಚುವರಿಯಾಗಿ ಸಾರಿಗೆ ಬಸ್ ಗಳು ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳಾದ ದೀಪಾ ಬಾಯಿ, ಆರ್. ಸುಷ್ಮಾ, ಮಾದೇಶ, ರಶ್ಮಿ, ಅಭಿ, ಆಕಾಶ್, ತಿಪ್ಪೇಸ್ವಾಮಿ, ನಾಗರಾಜ್, ಸುಚಿತ್ರ, ಕೀರ್ತಿರಾಜ್, ವಿಶ್ವನಾಥ್, ಕಾವ್ಯ, ಸೇರಿದಂತೆ ವಿವಿಧ ಗ್ರಾಮಗಳ ಪ್ರಯಾಣಿಕರು ಇದ್ದರು

About The Author

Namma Challakere Local News
error: Content is protected !!