ಪೌರಕಾರ್ಮಿಕರ ಹೊರಗುತ್ತಿಗೆ ಪದ್ದತಿ ಮುಕ್ತಿಗೆ ಸಚಿವ ಡಿ.ಸುಧಾಕರ್ ಗ್ರೀನ್ ಸಿಗ್ನಲ್
ಚಳ್ಳಕೆರೆ : ಈಡೀ ರಾಜ್ಯಾದ್ಯಂತ ಹಮ್ಮಿಕೊಂಡ ಹೊರ ಗುತ್ತಿಗೆ ಪೌರಕಾರ್ಮಿಕರ ನೇರಪಾವತಿಗೆ ಆದೇಶಿಸುವಂತೆ ನಡೆಸಿದ ಧರಣಿಯು.
ಚಳ್ಳಕೆರೆ ನಗರದಲ್ಲಿ ಸುಮಾರು ಐವತ್ತು ಪೌರಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರಿಗೆ ಪೌರಕಾರ್ಮಿಕರು ಮನವಿ ಸಲ್ಲಿಸಿ ಮಾತನಾಡಿದರು.
ನಗರದ ಬೆಂಗಳೂರು ರಸ್ತೆಯಲ್ಲಿ ಸಚಿವರನ್ನು ಬೇಟಿ ಮಾಡಿದ ಪೌರಕಾರ್ಮಿಕರು ಹೊರ ಗುತ್ತಿಗೆ ಯಿಂದ ಮುಕ್ತಗೊಳಿಸಿ ನಮ್ಮನ್ನು ನೇರಪಾವತಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ,
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪೌರಕಾರ್ಮಿಕರು ಹೋರಾಟ ಮಾಡುತ್ತ ಬಂದಿದ್ದೆವೆ ಆದರೆ ನಮಗೆ ಹೊರಗುತ್ತಿಗೆಯಿಂದ ಮುಕ್ತಿ ಸಿಕ್ಕಿಲ್ಲ.
ನಮ್ಮ ಕುಟುಂಬದ ನಿರ್ವಹಣೆ ಹಾಗೂ ಸಂಕಷ್ಟದ ಪರಿಸ್ಥಿತಿ ಯಲ್ಲಿ ಜೀವನ ನಡೆಸುತ್ತಿದ್ದೆವೆ ಆದ್ದರಿಂದ ನೇರಪಾವತಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಗರಸಭೆ ಹೊರಗುತ್ತಿಗೆ ನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಪೆನ್ನೇಶ್ ಮಂಜುನಾಥ್, ಮಹೇಶ್ , ಪ್ರಭು ದಿವಾಕರ್, ತಿಪ್ಪೇಸ್ವಾಮಿ, ಪಾಪಣ್ಣ, ಕಾಳಿದಾಸ, ಪಾಲಿಶ್, ತಿಪ್ಪೇಸ್ವಾಮಿ ಡಿ, ರಘು, ನಾಗರಾಜ್, ಸೋಮಶೇಖರ್, ಹನುಮಂತ, ಮಂಜು, ತಿಪ್ಪೇಶ್, ಪ್ರಸನ್ನ, ಬೆಳಗೆರೆ ಮಂಜು, ನಾಗರಾಜ್ ಇತರರು ಪಾಲ್ಗೊಂಡಿದ್ದರು