ಚಳ್ಳಕೆರೆ

ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಚಳ್ಳಕೆರೆ: ರಾಜ್ಯ ಸರ್ಕಾರವು ನಿರಂತರ ಜ್ಯೋತಿಯನ್ನು ಜಾರಿ ಮಾಡಿ ಹಲವು ವರ್ಷಗಳು ಕಳೆದರೂ ಸಹ ಗೋಪನಹಳ್ಳಿಯ ಮುಜುರೆ ಗ್ರಾಮವಾದ ಕನಕದಾಸ ನಗರದಲ್ಲಿ ಇರುವ 15ಕ್ಕೂ ಹೆಚ್ಚು ಮನೆಗಳಿಗೆ ನಿರಂತರ ವಿದ್ಯುತ್ ಭಾಗ್ಯ ಕಲ್ಪಿಸದೆ ಇರುವುದಕ್ಕೆ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಜುರೆ ಗ್ರಾಮವಾದ ಕನಕದಾಸ ನಗರದಲ್ಲಿ ಐದು ವರ್ಷ ಕಳೆದರೂ ಸಹ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಹಲವು ಬಾರಿ ಅಧಿಕಾರಿಗಳಿಗೆ ಅರ್ಜಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ನಿರಂತರ ವಿದ್ಯುತ್ ಕಂಬಗಳು ಕನಕದಾಸ ನಗರದಲ್ಲಿ ಇರುವ ಮನೆಗಳ ಮುಂದೆ ಹಾದು ಹೋಗಿದ್ದರು ಸಹ ನಿರಂತರ ವಿದ್ಯುತ್ ಇಲ್ಲಿಯವರೆಗೂ ನಾವು ಪಡೆದಿಲ್ಲ ಹಾಗೂ ರಾತ್ರಿ ಸಮಯದಲ್ಲಿ ಹಾವು, ಚೇಳು ,ಇತರೆ ವಿಷ ಜಂತು ಹುಳುಗಳು ಮನೆ ಅಕ್ಕ ಪಕ್ಕ ಹೆಚ್ಚಿನದಾಗಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ರಾತ್ರಿ ಸಮಯದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ ಹಾಗೂ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಆದರೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಗ್ರಾಮದ ಎಸ್ ಮಣಿಕಂಠ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮಂಜುನಾಥ್ ಮಾತನಾಡಿ ಕನಕದಾಸ ನಗರದಲ್ಲಿ 15ರಿಂದ 20 ಕುಟುಂಬ ವಾಸಿಸುತ್ತಿದ್ದೇವೆ ನಾವು ತ್ರೀಪೇಜ್ ವಿದ್ಯುತ್ ಮಾತ್ರ ನಾವು ಬಳಕೆ ಮಾಡುತ್ತಿದ್ದೇವೆ. ನಿರಂತರ ವಿದ್ಯುತ್ ಇಲ್ಲದೆ ಇರುವುದರಿಂದ ಕುಡಿಯುವ ನೀರಿನ ತೊಂದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಆಗುತ್ತಿದೆ ಇದರಿಂದ ಬೆಸ್ಕಾಂ ಅಧಿಕಾರಗಳು ನಿರಂತರ ವಿದ್ಯುತ್ ಕಲ್ಪಿಸಿ ಕೊಟ್ಟರೆ 15 ರಿಂದ 20 ಮನೆಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರು.

ಈಗಲಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಗೋಪನಹಳ್ಳಿಯ ಮುಜುರೆ ಗ್ರಾಮ ವಾದ ಕನಕದಾಸ ನಗರಕ್ಕೆ ನಿರಂತರ ವಿದ್ಯುತ್ ಕಲ್ಪಿಸಿ ಕೊಡುತ್ತಾರೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

Namma Challakere Local News

You missed

error: Content is protected !!