ಚಳ್ಳಕೆರೆ : ದೀಪಾವಳಿ ಕೊನೆಯ ದಿನದ ಇಂದು ಮುಂಜಾನೆ ಟಿಪರ್ ಹಾಗೂ ಮಿನಿ ಲಾರಿ ನಡುವೆ ಮುಖಾ ಮುಖಿ ಡಿಕ್ಕಿ ಚಾಲಕನ ಕೈ ತುಂಡಾಗಿ ಜಿಲ್ಲಾಪ್ಪತ್ರೆಗೆ ದಾಖಲಾದ ಘಟನೆ ಚಳ್ಳಕೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಮಿರಸಾಭಿಹಳ್ಳಿ ಗ್ರಾಮದ ಕೈಮರದ ಸಮೀಪ ಆಂದ್ರ ಮೂಲದ ಅಮರಾಪುರ ಗ್ರಾಮದಿಂದ ಕೋಳಿ ತುಂಬಿಕೊಂಡು ಚಳ್ಳಕೆರೆ ಕಡೆ ಬರುತ್ತಿದ್ದ ಅಶೋಕ ಲೈಲ್ಯಾಂಡ್ ಮಿನಿ ಲಾರಿ ಹಾಗೂ ಚಳ್ಳಕೆರೆ ಕಡೆಯಿಂದ ಪಾವಗಡೆ ಕಡೆ ಹೋಗುತ್ತಿದ್ದ ಟಿಪರ್ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಕೋಳಿ ಸಾಗಾಣಿಕೆ ವಾಹನಚಾಲಕ ಅನಿಲ್ ಕೈ ತುಂಡಾಗಿ ಬೇರ್ಪಟ್ಟಿದ್ದು ಸ್ಥಳಿಯರು ತುಂಡಾದ ಕೈ ಜೋಡಿಸಿ ಬಟ್ಟೆ ಸುತ್ತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಅಪಘಾತ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಕೈ ತುಂಡಾದ ವಾಹನ ಚಾಲಕನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಸ್ಪತ್ರೆಗೆ ಸಾಗಿಸಿದ್ದಾರೆ.
ಈ ಘಟನೆಯು ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.