ಚಳ್ಳಕೆರೆ : ಹಬ್ಬದ ಸಂಭ್ರಮದಲ್ಲಿ ಜೂಜಾಟದಲ್ಲಿ ತೊಡಗಿದ ಹಲವು ಮಂದಿಯನ್ನು ವಶಕ್ಕೆ ಪಡೆದು ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಸಾರ್ವಜನಿಕ‌ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಖಚಿತಿ ಮಾಹಿತಿ ಮೇರೆಗೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ ಹಣ ಹಾಗೂ 6 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಳ್ಳಕೆರೆ ತಾಲೂಕಿನ ದ್ಯಾವರನಹಳ್ಳಿ ಗ್ರಾಮದ ಹತ್ತಿರದ ಗುಡ್ಡದ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಮಂಗಳವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಚಳ್ಳಕೆರೆ ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದು ಇಸ್ಪೀಟ್ ಆಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಶ್ರೀನಿವಾಸ ತಂದೆ ತಿಪ್ಪೇಸ್ವಾಮಿ ಚಳ್ಳಕೆರೆಟೌನ್ ಮತ್ತು ಇತರೆಯವರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರವಾದ ಅಂದರ್ ಬಾಹರ್ ಇಸ್ಪೀಟ್
ಜೂಜಾಟ ಆಡುತ್ತಿದ್ದರೆ ಎಂಬ ಮಾಹಿತಿ ಮೆರೆಗೆ ಹಾಗೂ 4460 ರೂ . ಹಣ ಹಾಗೂ ಇಸ್ಪೀಟ್ ಎಲೆ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Namma Challakere Local News

You missed

error: Content is protected !!