ದೆಹಲಿಯಲ್ಲಿ ಭವ್ಯವಾಗಿ ಸಾಗಿದ ಮಕ್ಕಳ ಸಾಹಿತ್ಯ ಸಮ್ಮೇಳನ ಮೆರವಣಿಗೆ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದೆಹಲಿ ಘಟಕ ವತಿಯಿಂದ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ- ೨೦೨೩ ರ ಮರೆವಣಿಗೆ ದೆಹಲಿ ಕನ್ನಡ ಶಾಲೆಯಿಂದ ಲೋಧಿ ರಸ್ತೆಯಲ್ಲಿರುವ ಸತ್ಯಸಾಯಿ ಸಭಾಂಗಣದವರೆಗೆ ಒಂದು ಕಿ.ಮೀ ಗಿಂತ ಹೆಚ್ಚು ಸಾಗಿತು.

ಈ ಮೆರವಣಿಗೆಯುದ್ದಕ್ಕೂ ಶಿವಮೊಗ್ಗ ಜಿಲ್ಲೆಯ ಮಕ್ಕಳಿಂದ ಡೊಳ್ಳು ಕುಣಿತ, ಹಾಸನ ಜಿಲ್ಲೆಯ ಮಕ್ಕಳಿಂದ ಹುಲಿಕುಣಿತ ವಿಶೇಷವಾಗಿ ಗಮನ ಸೆಳೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಮಕ್ಕಳಿಂದ ಕೀಲುಕುದುರೆ ಕುಣಿತ, ಬೊಂಬೆ ಕುಣಿತಗಳಲ್ಲದೆ ವಿವಿಧ ಜನಪದ ಕಲೆಗಳನ್ನು ಪ್ರದರ್ಶಿಸಿಲಾಯಿತು.

ಈ ಮೆರವಣಿಗೆಯ ಮೂಲಕ ಸಮ್ಮೇಳದ ಸರ್ವಾಧ್ಯಕ್ಷರಾದ ಸುದೀತಿ ಅಂಬಳೆ ಹಾಗೂ ಸಹ ಅಧ್ಯಕ್ಷರುಗಳಾದ ನೂತನ ಕೈಕಾಡ, ಸ್ವಾತಿ ನಾಯಕ್ , ರಕ್ಷಿತಾ ಕಾಶಿನಾಥ್, ರಾಜತೀರ್ಥ, ರಕ್ಷಿತಾ, ಕು.ವೆಂಕಟೇಶ ಕುಲಕರ್ಣಿ ಇವರನ್ನು ಅಶ್ವದಳದ ರಥದಲ್ಲಿ ಕರೆತರಲಾಯಿತು.

ಇದು ನೋಡಿದ ದೆಹಲಿಯ ನಾಗರಿಕರು ಕರ್ನಾಟಕದ ಕನ್ನಡಾಂಬೆಯ ಮಹಾತ್ಮೆಯನ್ನು ತಿಳಿಯಲು ಪ್ರಯತ್ನಿಸಿದರು.

ಈ ಮರವಣಿಗೆ ಕಾರ್ಯಕ್ರಮಕ್ಕೆ ಶ್ರವಣ ಬೆಳಗೊಳದ ಶಾಸಕರಾದ ಸಿ.ಎನ್ ಬಾಲಕೃಷ್ಣ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಡಾ. ಎಲ್ ಹನುಮಂತಯ್ಯ , ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ. ಎನ್ ಆಶೋಕ್ , ಅರುಣ್ ಸಿ. ಎಸ್ , ಕೃಷ್ಣರಾಜ್ , ವಸಂತ ಶೆಟ್ಟಿ ಬೆಳ್ಳಾರೆ, ಅರವಿಂದ ಬಿಜೈ, ಮಹದೇವ್ , ಹೂ. ವಿ ಸಿದ್ದೇಶ್ , ಶಿವರಾಮ್, ಹರಿಪ್ರಿಯಾ,ಡಾ. ಎಚ್ ಎಲ್ ನಾಗರಾಜ್ ಚಿತ್ರದುರ್ಗ ಜಿಲ್ಲೆಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಯೋಗೇಶ್ ಸಹ್ಯಾದ್ರಿ , ಯಾದಲಗಟ್ಟೆ ಜಗನ್ನಾಥ್, ಎಸ್ ಎಚ್ ಶಫಿಉಲ್ಲ, ಪಿಲ್ಲಾಳಿ ಚಿತ್ರಲಿಂಗಪ್ಪ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ಕೆ ಬಸವರಾಜು , ಅರುಣ್ ಸಿ.ಎಸ್ , ಭವಾನಿ ಲೋಕೇಶ್ , ಮಾಲಿನಿ ಪ್ರಹ್ಲಾದ್, ಸುಜಾತ ನಿಂಬಾಳ, ಸಂಧ್ಯಾ, ಲತಾ ಪುಟ್ಟೇಗೌಡ, ದೀಪ್ತಿ ಸೋಫಿಯಾ, ವಿಮಲಾ ರಂಗನಾಥ್ , ಕು.ಪೂರ್ಣಿಮಾ ಅಡಿಗ, ಶ್ರೀ ಅಭಿಜಿತ್ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!