ಬಯಲು ಸೀಮೆಯಲ್ಲಿ ಮರಗಳ ಮಾರಣಹೋಮ : ಅರಣ್ಯ ಅಧಿಕಾರಿಗಳೇ..! ಇತ್ತ ಗಮನಹರಿಸಿ..?

ಚಳ್ಳಕೆರೆ : ಬಯಲು ಸೀಮೆಯಲ್ಲಿ ಗಿಡ ಮರಗಳನ್ನು ಬೆಳೆಸುವುದು ಒಂದು ಸಾವಾಲೇ ಸರಿ. ಇಂತಹ ಸಂದ್ಗಿದ ಪರಿಸ್ಥಿತಿಯಲ್ಲಿ ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಪಣ ತೊಟ್ಟು ನಗರದಲ್ಲಿ ಸರಿ ಸುಮಾರು ನೂರಾರು ಗಿಡಗಳನ್ನು ಕಳೆದ ಎಂಟು ವರ್ಷಗಳ ಹಿಂದೆ ಯುವಕರ ತಙಡವೊಂದು ಗಿಡಗಳನ್ನು ಬೆಳೆಸಿದ್ದರಿಂದ ಇಂದು ಹೆಮ್ಮರವಾಗಿ ಬೆಳೆದು ಮನುಷ್ಯ ಸಂಕುಲಕ್ಕೆ ನೆರಳು ಗಾಳಿ ನೀಡುತ್ತಿವೆ.

ಆದರೆ ಕೆಲ ಪಟ್ಟಭದ್ರರಿಂದ ಹೆಮ್ಮರವಾಗಿ ಬೆಳೆದ ಮರಗಳಿಗೆ ಇಂದು ಕೊಡಲಿ ಪೆಟ್ಟು‌ ನೀಡಿರುವುದು ದುರಂತವೇ ಸರಿ.

ಹೌದು ಅಷ್ಟಕ್ಕೂ ಈ ಘಟನೆ ನಡೆದಿದ್ದಾರು ಎಲ್ಲಿ ಎಂದರೆ ಚಳ್ಳಕೆರೆ ನಗರದ ಹೃದಯ ಭಾಗವಾದ ನಾಲ್ಕನೇ ವಾರ್ಡ್ ನ ಹಳೆ ನಗರದ ರಾಜ್ ಕುಮಾರ್ ಪ್ರಮುಖ ರಸ್ತೆ ಪಕ್ಕದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವೀರಭದ್ರಸ್ವಾಮಿ ಯುವಕರ ಸ್ನೇಹ ಬಳಗದಿಂದ ಈ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತ ಬಂದಿತ್ತು, ಆದರೆ ಇಂದು ಹೆಮ್ಮರವಾಗಿ ಬೆಳೆದ ಮರಗಳನ್ನು ಕೊಡಲಿ‌ಪೆಟ್ಟು ನೀಡಿ ನೆಲಕ್ಕೆ ಉರುಳಿಸಿರುವುದು ಅಲ್ಲಿನ ಸಾರ್ವಜನಿಕರಿಗೆ ಹಾಗೂ ಯುವಕರ ಬಳಗಕ್ಕೆ ನೋವು ತಂದಿದೆ.

ಇನ್ನೂ ಅರಣ್ಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೇ ಏಕಾ ಏಕಿ ಮರ ಕಡಿದರ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

ಇನ್ನೂ ತಡವಾಗಿ ಬೆಳಕಿಗೆ ಬಂದ ಈ ಪ್ರಕರಣ ನಾಲ್ಕನೇ ವಾರ್ಡನ ಹಳೆನಗರದ ರಾಜ್ ಕುಮಾರ್ ರಸ್ತೆಯ ಎರಡು ಹಿಕ್ಕೆಲಗಳಲ್ಲಿ ಬೆಳೆಸಿದ ಅಷ್ಟು ಮರಗಳನ್ನು ಕಡಿದಿದ್ದಾರೆ ಇನ್ನೂ ಕೇವಲ ಒಂದು ಮರ ಮಾತ್ರ ಉಳಿದಿದ್ದು ಅಷ್ಟರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರವನ್ನು ಉಳಿಸಿದ್ದಾರೆ ಎನ್ನಲಾಗಿದೆ.

ಬಾಕ್ಸ್ ಮಾಡಿ :

ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವೀರಭದ್ರಸ್ವಾಮಿ ಯುವಕರ ಸ್ನೇಹ ಬಳಗದಿಂದ ಸಸಿ ನೆಟ್ಟು ಪೋಷಣೆ ಮಾಡಿದ ಮರಗಳು ಇಂದು ನಮ್ಮ ಕಣ್ಣಾ ಮುಂದೆ ಮರಗಳ ಮಾರಣಹೋಮ ನಡೆದಿರುವುದು ದುಖಃಕರ ಸಂಗತಿ ಈ ಘಟನೆಗೆ ಕಾರಣರಾದವರ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸೂಕ್ತಕ್ರಮ ಜರುಗಿಸಬೇಕು.

— ಶ್ರೀ ಮುರುಳಿ ಶ್ರೀ ವೀರಭದ್ರಸ್ವಾಮಿ ಯುವಕರ ಸ್ನೇಹ ಬಳಗದ ಪದಾಧಿಕಾರಿಗಳು

Namma Challakere Local News
error: Content is protected !!