ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಚಳ್ಳಕೆರೆ ಸಾರ್ವಜನಿಕರಿಗೆ ಬಹುಮಾನ
ಏನಿದು..? ಈ ಬಹುಮಾನ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..!
ಚಳ್ಳಕೆರೆ : ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಸಲುವಾಗಿ ಚಳ್ಳಕೆರೆ ನಗರಸಭೆಯಿಂದ 2023ರ ದೀಪಾವಳಿಗೆ ವಿನೂತನವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದರು.
ಈ ಕಾರ್ಯಕ್ರಮಗಳಲ್ಲಿ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.
ದಿನಾಂಕ:11-11-2023ರ ಶನಿವಾರ ಬೆಳಿಗ್ಗೆ 11-00 ಘಂಟೆಗೆ “ಸ್ವಚ್ಛ ದೀಪಾವಳಿ ಶುಭ ದೀಪಾವಳಿ” ಮತ್ತು “ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಳಸುವುದು ಬೇಡ” ಎಂಬ ಪರಿಕಲ್ಪನೆಯಡಿಯಲ್ಲಿ ಕಾರ್ಯಕ್ರಮಗಳನ್ನು ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ. ಆಸಕ್ತರು ಸದರಿ ಸ್ಥಳದಲ್ಲಿಯೇ
ಬೆಳಿಗ್ಗೆ 10-00 ಘಂಟೆಯಿAದ 11-00 ರವರೆಗೆ ನೊಂದಾಯಿಸಿಕೊAಡು ಭಾಗವಹಿಸಬಹುದಾಗಿರುತ್ತದೆ.

ಬಹುಮಾನ

ಕಾರ್ಯಕ್ರಮದ ವಿವರ
1.ನೈಸರ್ಗಿಕ ಹೂವುಗಳು ಹಾಗೂ ಬಣ್ಣಗಳನ್ನು ಬಳಸಿ ರಂಗೋಲಿ ಬಿಡಿಸುವ ಸ್ಪರ್ಧೆ,
ಪ್ರಥಮ 5000/-
ದ್ವಿತೀಯ – 3000/-
ತೃತೀಯ – 2000/-
2.ಮರುಬಳಕೆ/ಉಪಯೋಗಿಸಿದ ವಸ್ತುಗಳನ್ನು ಕಾಗದವನ್ನು ಬಳಸಿ ದೀಪಾವಳಿಯ ಅಲಂಕಾರಿಕ
ಬ್ಯಾನರ್/ಪೋಸ್ಟರ್/ಹ್ಯಾAಗಿAಗ್/ಇತರೆ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು.
ಪ್ರಥಮ 5000/-
ದ್ವಿತೀಯ – 3000/-
ತೃತೀಯ – 2000/-

3.“ಸ್ವಚ್ಛ ದೀಪಾವಳಿ ಶುಭ ದೀಪಾವಳಿ” ಮತ್ತು “ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಳಸುವುದು ಬೇಡ” ಎಂಬ ಪರಿಕಲ್ಪನೆಯಡಿಯಲ್ಲಿ ರೀಲ್ಸ್ ಗಳನ್ನು ಚಿತ್ರೀಕರಿಸುವುದು. (ರೀಲ್ಸ್ಗಳನ್ನು ಸ್ಥಳೀಯವಾಗಿ ಚಿತ್ರೀಕರಿಸತಕ್ಕದ್ದು)
ಪ್ರಥಮ 5000/-
ದ್ವಿತೀಯ – 3000/-
ತೃತೀಯ – 2000/-

ವಿಶೇಷ ಸೂಚನೆ:
ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಈ ಕೊಂಡಿಯನ್ನು ಬಳಸಿ ಪ್ರತಿಜ್ಞೆಯನ್ನು ಕೈಗೊಳ್ಳುವುದು. ಮತ್ತು ಪ್ರಮಾಣಪತ್ರವನ್ನು ಹಾಜರುಪಡಿಸತಕ್ಕದ್ದು.
hಣಣಠಿs://ಠಿಟeಜge.mಥಿgov.iಟಿ/sತಿಚಿಛಿhh-ಜiತಿಚಿಟi-shubh-ಜiತಿಚಿಟi/

About The Author

Namma Challakere Local News
error: Content is protected !!