ಚಳ್ಳಕೆರೆ : ಬೆಳಕಿನ ಹಬ್ಬ ದೀಪವಾಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಬೇಕು ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದರು.
ಅವರು ನಗರದ ಚಿತ್ರದುರ್ಗ ರಸ್ತೆಯ ನಗರಸಭೆ ಕಾರ್ಯಲಾಯದ ಮುಂಬಾಗದಲ್ಲಿ ಸ್ವಚ್ಚ ದೀಪವಾಳಿ ಶುಭ ದೀಪವಾಳಿ ಎಂಬ ಸ್ಲೋಗನ್ ಮೂಲಕ ಸಾರ್ವಜನಿಕರಿಂದ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಿ ಮಾಡಿ ಮಾತನಾಡಿದರು.
ಈಡೀ ದೇಶವೇ ಸಂಭ್ರಮಿಸುವ ಬೆಳಕಿನ ಹಬ್ಬ ದೀಪವಾಳಿವನ್ನು ಅತೀ ಸಂತಸ ಸಡಗರದಿಂದ ಆಚರಿಸುತ್ತಾರೆ, ಆದರೆ ನಾಗರೀಕರು ಅಷ್ಟೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಆದ್ದರಿಂದ ಈ ಬಾರಿ ಸರಕಾರದ ಆದೇಶದಂತೆ ಸ್ವಚ್ಚ ದೀಪವಾಳಿ ಶುಭ ದೀಪವಾಳಿ ಎನ್ನುವ ಮೂಲಕ ರಸಾಯನಿಕ ಮುಕ್ತ ಹಸಿರು ಪಟಾಕಿ ಬಳಸುವಂತೆ ಕರೆ ನೀಡಿದರು.
ಇನ್ನೂ ನಗರಸಭೆ ಸದಸ್ಯ ಎನ್.ಜಯಣ್ಣ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿ ಆಚರಿಸುವ ದೀಪವಾಳಿಯನ್ನು ಅತೀ ಸಂಭ್ರಮದಿAದ ಆಚರಿಸಬೇಕು ಅದರಂತೆ ಜಾಗರೂಕತೆಯಿಂದ ಪಟಾಕಿ ಹಚ್ಚಬೇಕು, ಪರಿಸರ ಮಾಲಿನ್ಯ ಮಾಡದಂತೆ ಕೇವಲ ಹಸಿರು ಪಟಾಕಿಯನ್ನೆ ಬಳಸಬೇಕು, ನಗರದ ನಾಗರೀಕರಿಗೆ ತೊಂದರೆಯಾಗದAತೆ ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಈ ಬಾರಿಯ ದೀಪವಾಳಿ ಆಚರಿಸಿ ಎಂದರು.
ಬಾಕ್ಸ್ ಮಾಡಿ :
ಬೆಳಕಿನ ಹಬ್ಬವನ್ನು ನಮ್ಮ ಮನೆಯನ್ನು ಬೆಳಗುತ್ತದೆ, ಇಂತಹ ಹಬ್ಬದಲ್ಲಿ ಹಸಿರು ಪಟಾಕಿ ಹಚ್ಚುವ ಮೂಲಕ ಸ್ವಚ್ಚ ಪರಿಸರಕ್ಕೆ ನಾಂದಿ ಹಾಡೋಣ, ಇನ್ನೂ ಶಬ್ದ ಮಾಲಿನ್ಯ, ವಾಯು ಮಾಲಿನ್ಯವನ್ನು ಆದಷ್ಟು ತಡೆಗಟ್ಟುವ ನಿಟ್ಟಿನಲ್ಲಿ ಮನ ಮನದಲ್ಲಿ ಬೆಳಗುವ ದೀಪವಾಳಿಯನ್ನು ಸಂಭ್ರಮಿಸೊಣ..—
ಬಿ.ಪರೀದ್ ಖಾನ್ ಸುರಕ್ಷಾ ಪಾಲಿ ಕ್ಲಿನಿಕ್ ಮಾಲೀಕ

ಇದೇ ಸಂಧರ್ಭದಲ್ಲಿ ನಗರಸಭೆ ಪರಿಸರ ಇಂಜಿನಿಯಾರ್ ನರೇಂದ್ರಬಾಬು, ಇಂಜಿನಿಯಾರ್ ವಿನಯ್, ಲೋಕೇಶ್, ದಾದಪೀರ್, ಓ.ಮಂಜುನಾಥ್, ಭದ್ರಣ್ಣ, ಇತರ ಸಿಬ್ಬಂದಿ ವರ್ಗ, ಶಾಲಾ ಮಕ್ಕಳು ಸಾರ್ವಜನಿಕರು ಇದ್ದರು.

Namma Challakere Local News
error: Content is protected !!