ಚಳ್ಳಕೆರೆ : ಕಳೆದ ಹಲವು ದಿನಗಳಿಂದ ನಿರಂತರವಾಗಿ ಸಾರ್ವಜನಿಕರ ಕುಂದು ಕೊರೆತೆಗಗಳ ಸಲುವಾಗಿ ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಮೀರಸಾಬಿಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಆಲಿಸಿ ಮಾತನಾಡಿದರು.
ಸರಕಾರದ ಯೋಜನೆಗಳನ್ನು ಸಾರ್ವಜನಿಕರು ಸದ್ಬಳಿಕೆ ಮಾಡುಕೊಳ್ಳುವ ಮೂಲಕ ಬಡತನ ನಿರ್ಮೂಲನೆ ಮಾಡಬೇಕು ಅದರಂತೆ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹ ಲಕ್ಷಿö್ಮÃ ಯೋಜನೆಯಲ್ಲಿ ಎಷ್ಟು ಜನಕ್ಕೆ ನೆರವಾಗಿ ಇನ್ನೂ ಎಷ್ಟು ಮಹಿಳೆಯರಿಗೆ ಸಿಕ್ಕಲ್ಲ ಎಂಬುದು ಅಧಿಕಾರಿಗಳ ಬಳಿ ಮಾಹಿತಿ ಇರಬೇಕು ಯೋಜನೆ ನೆರವು ಸಿಕ್ಕಲ್ಲದವರಿಗೆ ಅತೀ ತುರ್ತಾಗಿ ಸಿಗುವಂತೆ ಮಾಡಬೇಕು ಎಂದರು.
ಇನ್ನೂ ಗ್ರಾಮೀಣ ಭಾಗಗಳಲ್ಲಿ ಆರ್ಥಿಕ ಸ್ಥಿತಿವಂತರ ಪ್ರಭಾವದಿಂದ ಜಡ ಜನರ ಜಮೀನು ಹಾಗೂ ನಿವೇಶನಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ಬಡವರ ಪಾಲಿಗೆ ಇಲ್ಲದಂತೆ ಮಾಡಿರುತ್ತಾರೆ ಅಂತಹ ಪ್ರಕರಣಗಳನ್ನು ಸ್ಥಳಿಯವಾಗಿ ಇರುವ ಪಿಡಿಒ ಹಂತದ ಅಧಿಕಾರಿಗಳು ಪತ್ತೆ ಹಚ್ಚಿ ಅರ್ಹರಿಗೆ ವಾಪಸ್ ಕೊಡಿಸುವ ಕೆಲಸ ಮಾಡಬೇಕು.
ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಪಡೆಯಲು ಶಾಸಕರ ಹಂತದವರೆಗೂ ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಬಾರದು, ರೈತಾಪಿ ವರ್ಗಕ್ಕೆ ಪಹಣಿ, ಬೀಜ ,ರಸಗೊಬ್ಬರ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ ಅಧಿಕಾರಿಗಳನ್ನು ಅನ್ನದಾತರು ಮರೆಯುವುದಿಲ್ಲ ಜನಸಂಪರ್ಕ ಸಭೆಗಳಲ್ಲಿ ಅರ್ಜಿ ಸಲ್ಲಿಸುವ ಸಾರ್ವಜನಿಕ ಕೆಲಸಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ ಮುಂದಿನ ಸಭೆಗಳಲ್ಲಿ ವರದಿ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಹಾನ್ ಪಾಷಾ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ, ಕೃಷಿ ಅಧಿಕಾರಿ ಅಶೋಕ್, ತೋಟಗಾರಿಕೆ ಇಲಾಖೆ ಸಹಾಯಕ ನಿದೇರ್ಶಕ ವಿರುಪಾಕ್ಷಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಹರಿಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾನಾಗರಾಜ್, ಉಪಾಧ್ಯಕ್ಷ ಗೋವಿಂದಪ್ಪ, ಸದಸ್ಯರುಗಳು, ಮುಖಂಡರಾದ ಕರಿಕೆರೆರಾಜಪ್ಪ, ಮೂರ್ತಿ, ರಂಗಸ್ವಾಮಿ, ಪ್ರಕಾಶ್, ಸುದರ್ಶನರೆಡ್ಡಿ, ಓಬಳೇಶ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!