ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ
2024-25ರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನಾ ತಯಾರಿ ಪ್ರಕ್ರಿಯೆಯ ನರೇಗಾ ನಡಿಗೆ ಸುಸ್ಥಿರ ಕಡೆಗೆ ಜನ ಜಾಗೃತಿ ಜಾಥದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಸೋಮಶೇಖರ್ ಭಾಗವಹಿಸಿ ನರೇಗಾ ಮಾಹಿತಿ ಕರಪತ್ರ ನೀಡಿದರು.
ಇನ್ನೂ ಎಲ್ಲರೂ ಹೆಚ್ಚಿನ ಬೇಡಿಕೆ ಇಟ್ಟು ವೈಯಕ್ತಿಕ ಆಸ್ತಿ ಸೃಜಿಸಿಕೊಳ್ಳುವ ಮತ್ತು ಗ್ರಾಮದ ಸ್ಥಿರಾಸ್ತಿ ಸೃಜನೆ ಹಾಗೂ ಜಲ ಮೂಲ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಕಾರ್ಯದರ್ಶಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ಜಿಲ್ಲಾ ಮತ್ತು ತಾಲ್ಲೂಕು ನರೇಗಾ ಸಂಬಂಧಿತ ಸಿಬ್ಬಂದಿ, ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಹಾಗೂ ಪಿಡಿಓ ಸಾರ್ವಜನಿಕರು ಭಾಗವಹಿಸಿದ್ದರು