ಚಿತ್ರದುರ್ಗ : ಜಿಲ್ಲೆಯ ಹೊರ ಹೊಲಯದ ಅನಾಥ ಆಶ್ರಮ (ರಾಜಲಕ್ಷ್ಮಿ) ಹಿರಿಯ ನಾಗರಿಕರ ಆಶ್ರಮ, ವೃದ್ಧಾಶ್ರಮ ಹಾಗೂ ಮಾಳಪ್ಪನ ಹಟ್ಟಿಯ ತೀಕ್ಷ್ಣ ಅಂದರ ಪುನಶ್ಚೇತನ ಆಶ್ರಮಗಳಿಗೆ 68 ನೇಯ ಕನ್ನಡ ರಾಜ್ಯೋತ್ಸವದ ಪ್ರಯಕ್ತ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಬ್ರೆಡ್ ಮತ್ತು ಸಿಹಿ ತಿನಿಸುಗಳು ಹಂಚುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಇದ್ದಾಗ ಗಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಬರುವರೆ ಹೆತ್ತವರು ಇರುವಾಗಲೇ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರವೃತ್ತಿಯನ್ನು ಆಧುನಿಕ ಯುಗದ ಈಗಿನ ಯುವ ಪೀಳಿಗೆ ರೂಡಿಸಿಕೊಳ್ಳಬೇಕು ಹಾಗೂ ವಿಕಲಚೇತನರಾದರೂ ನಾವು ಯಾರಿಗೂ ಕಮ್ಮಿ ಇಲ್ಲ ನಮ್ಮಲ್ಲೂ ಅದಮ್ಯ ಚೇತನ ಉತ್ಸಾಹ, ಸಾಧಿಸುವ ಹಂಬಲವಿದೆ ಎಂದು ಸದಾ ಕ್ರೀಯಶೀಲತೆ ಮೆರೆಯುವ ಮಕ್ಕಳ ಬಗ್ಗೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಪ್ರಶಂಶಿಸಿದರು ಈ ಸಂದರ್ಭದಲ್ಲಿ ಆಶ್ರಮದ ಮೇಲ್ವಿಚಾರಕರಾದ ರಾಜಶೇಖರ್, ಅಂದರ ಮಕ್ಕಳ ಆಶ್ರಮದ ಮೇಲ್ವಿಚಾರಕರಾದ ಕಾರ್ತಿಕ್ ರೆಡ್ಡಿ, ಪರಿಶ್ರಮ ಪ್ರೇರಣಾ ಸಂಸ್ಥೆಯ ಕಾರ್ಯದರ್ಶಿ ಎಂ.ಪರಶುರಾಮ್, ಅಧ್ಯಕ್ಷ ಮಹಾಂತೇಶ್ ನಿರ್ದೇಶಕರಾದ ವಿಜಯ್‌ಕುಮಾರ್, ಶಿವಮೂರ್ತಿ ಟಿ ಕೋಡಿಹಳ್ಳಿ, ಯಶೋಧರ, ಲಕ್ಷ್ಮಣ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!