ನಾಯಕನಹಟ್ಟಿ:: ಇಂದಿನ ಯುವಕರು ಶಿಕ್ಷಣದ ಗಮನ ಹರಿಸುವುದರ ಜೊತೆಗೆ ಉತ್ತಮ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ ಮುತ್ತಯ್ಯ ಹೇಳಿದ್ದಾರೆ.

ಸೋಮವಾರ ನಲಗೇತನಹಟ್ಟಿ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಮಹಋಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಸಮಾಜಕ್ಕೆ ಮಹಾಋಷಿ ವಾಲ್ಮೀಕಿ ಅವರ ಕೊಡುಗೆ ಅಪಾರ ಅವರ ವಿಚಾರಧಾರೆಗಳನ್ನು ಯುವಕರು ಅಧ್ಯಯನ ಮಾಡಬೇಕು ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನದಲ್ಲಿ ಇಂದಿನ ಯುವಕರು ಸಾಗಬೇಕು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದರು.

ಇನ್ನೂ ವಾಲ್ಮೀಕಿ ಭಾವಚಿತ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಮಹಾಋಷಿ ವಾಲ್ಮೀಕಿ ಭಾವಚಿತ್ರಕ್ಕೆ ಭಕ್ತಿಯ ನಮನವನ್ನು ಸಲ್ಲಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಉಪಾಧ್ಯಕ್ಷ ಈಗಲೂ ಬೋರಯ್ಯ, ಹಾಗೂ ಸರ್ವ ಸದಸ್ಯರು , ಮತ್ತು ಊರಿನ ಪ್ರಮುಖರಾದ ಪಿ ಎಂ ಪೂರ್ಣ ಓಬಯ್ಯ, ಮಾಜಿ ಉಪಾಧ್ಯಕ್ಷ ಹಾಲಿ ಸದ್ಯಸ ಎಂ ಬಿ ಬೊಮ್ಮಲಿಂಗೇಶ್, ಸದಸ್ಯ ಪಿ ಎನ್ ಮುತ್ತಯ್ಯ, ಗ್ರಾಮದ ಯುವ ಮುಖಂಡ ಪಿ ಬಿ ಪೂಜಾರಿ ಓಬಯ್ಯ, ಜಿ ಸಿ ಗೌಡ್ರು ಬೋರಯ್ಯ, ಮರಿಗೌಡ್ರು, ಎಸ್ ಜಿ ಸಣ್ಣ ಬೋರಯ್ಯ, ನಿಂಗರಾಜ್, ಎಂ ಬಿ ಹರೀಶ್, ಡಾ.ಎಂ ಪಿ ಮಂಜುನಾಥ್, ಜಿ ಬಿ ಜಲಂಧರ್, ಸೇರಿದಂತೆ ನಲಗೇತನಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!