ಚಳ್ಳಕೆರೆ : ಬಿಸಾಕಿದ್ದ ಊಟ ತಿಂದು 17 ಮೇಕೆಗಲಕು ಸಾವನ್ನಪ್ಪಿದ ಘಟನೆ ನಡೆದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಕಾವಲಿನಲ್ಲಿ ಮಾರಮ್ಮದೇವಿ ಜಾತ್ರೆ ನಡೆಯುವ ಸ್ಥಳದಲ್ಲಿ ಭಕ್ತರು ಅರಕೆ ತೀರಿಸಲು ಬಾಡೂಟ ಮಾಡಿ ಸವಿದು ಉಳಿದ ಉಳಿದ ಅನ್ನವನ್ನು ಸ್ಥಳದಲ್ಲೇ ಎಸೆದು ಹೋಗಿದ್ದಾರೆ. ಎಂದಿನAತೆ ಮೇಕೆಗಳು ಮೇಯಲು ಹೋದಾಗ ಈ ಅನ್ನವನ್ನು ತಿಂದು 17 ಮೇಕೆಗಳು ಅಸ್ವಸ್ಥಗೊಂಡು ಮೃತಪಟ್ಟಿವೆ ಸ್ಥಳಕ್ಕೆ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಲಾಗುದೆ. ಇನ್ನು ಮುಂದೆಯಾದರೂ ಭಕ್ತರು ದೇವಿಯ ಪ್ರಸಾದದ ಹೆಸರಿನಲ್ಲಿ ಮಾಡಿ ಎಲ್ಲೆಂದರಲ್ಲಿ ಎಸೆದು ಮೂಕ ಪ್ರಾಣಿಗಳ ಸಾವಿಗೆ ಕಾರಣರಾಗದೆ ಜಾಗೃತರಾಗುವಂತೆ ಕಳಕಳಿಯ ಮನವಿ.

About The Author

Namma Challakere Local News
error: Content is protected !!