ಚಳ್ಳಕೆರೆ : ಅ.28 ರಂದು ನಡೆಯುವ ಶ್ರೀ ವಾಲ್ಮೀಕಿ ಜಯಂತಿ ಪ್ರಯುಕ್ತ ನಗರದ ವಾಲ್ಮಿಕಿ ವೃತ್ತದಲ್ಲಿ ಇಂದು ಬೈಕ್ ರ‍್ಯಾಲಿ ಆಯೋಜಿಸಿಲಾಗಿತ್ತು.
ಇನ್ನೂ ವಾಲ್ಮೀಕಿ ಸಮುದಾಯದ ಯುವ ಮುಖಂಡರು, ಹಾಗೂ ಹಿರಿಯ ಗಣ್ಯರು ಸೇರಿ ನೂರಾರು ಬೈಕ್‌ಗಳ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು.
ಮೊದಲಿಗೆ ರ‍್ಯಾಲಿಗೆ ಚಾಲನೆ ನೀಡಿದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹಾಗೂ ನಾಯಕ ಸಮುದಾಯದ ಯುವ ಮುಖಂಡರು ಹಾಗೂ ಹಲವು ಗಣ್ಯರು ವಾಲ್ಮೀಕಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಗರದ ಪ್ರಮುಖ ರಾಜಾ ಬೀದಿಗಳನ್ನು ಮೆರವಣೆಗೆ ಜಾಗೃತಿ ಜಾಥ ಮಾಡುವ ಮೂಲಕ ವಾಲ್ಮೀಕಿ ಜಯಂತಿಗೆ ಶುಭಾ ಕೋರಿದರು.
ವಾಲ್ಮೀಕಿ ವೃತ್ತದಿಂದ ಹೊರಟ ಬೈಕ್ರ‍್ಯಾಲಿ ಅಂಬೇಡ್ಕರ್ ವೃತ್ತ, ನೆಹರು ವೃತ್ತದಿಂದ ಬಳ್ಳಾರಿ ರಸ್ತೆಯ ಮೂಲಕ ಚಿತ್ರಯ್ಯನಹಟ್ಟಿ, ಸೂಜಿಮಲ್ಲೇಶ್ವರ ನಗರದಿಂದ ಮತ್ತೆ ನೆÀಹರು ವೃತ್ತ ಬಳಸಿ ಹಿರಿಯೂರು ರಸ್ತೆಯಲ್ಲಿರುವ ಬಸವೇಶ್ವರÀ ವೃತ್ತದಿಂದ ಗಾಂಧಿನಗರ, ಅಂಬೇಡ್ಕರ್ ನಗರದಿಂದ ಸೋಮಗುದ್ದು ರಸ್ತೆ ಮುಖಾಂತರ ಪುನಹಃ ವಾಲ್ಮೀಕಿ ವೃತ್ತದಲ್ಲಿ ಕೊನೆಯಾಯಿತು.
ಸುಮಾರು 150 ಕ್ಕೂ ಹೆಚ್ಚು ಬೈಕುಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದವು
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ವೀರಭದ್ರಪ್ಪ, ಭಾರತೀಯಜೀವ ವೀಮೆ ಅಭಿವೃದ್ದಿಅಧಿಕಾರಿ ತಿಪ್ಪೇಸ್ವಾಮಿ, ಟಿ.ಜೆ.ತಿಪ್ಪೇಸ್ವಾಮಿ, ಸಿ.ಟಿ.ವಿರೇಶ, ಚೇತನ್‌ಕುಮಾರ್, ಸುರೇಶ, ನಾಗಭೂಷಣ್, ಮಂಜುನಾಥ್, ಜಿಪಂ.ಮಾಜಿ ಸದಸ್ಯ ಬಿಪಿ.ಪ್ರಕಾಶ್ ಮೂರ್ತಿ, ಸಿಟಿ.ಶ್ರೀನಿವಾಸ್, ವೀರೇಶ್, ದಳವಾಯಿ ಮೂರ್ತಿ, ಪಾಲಯ್ಯ, ಗಿರಿಯಪ್ಪ, ಹಳೆ ನಗರದ ವೀರಭದ್ರಿ, ಮಹೇಶ, ಗುರುಸ್ವಾಮಿ ಜಯಲಕ್ಷಿö್ಮ, ವಾಲ್ಮೀಕಿ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಇದ್ದರು.
ಬೈಕ್ರ‍್ಯಾಲಿಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಹೆಚ್ಚಿನ ನಿಗವಹಿಸಿದ್ದು ಪಿಎಸ್‌ಐ. ಧರೆಪ್ಪಾ ಬಾಳಪ್ಪ ದೊಡ್ಡಮನಿ, ವಿಶಾಲ್, ನಾಗೇಂದ್ರ, ಇತರರು ಇದ್ದರು.