ಆರೋಗ್ಯ ಇಲಾಖೆ ಕುದಾಪುರ ಗ್ರಾಮಕ್ಕೆ ಆಶಾ ಕಾರ್ಯಕರ್ತೆಯನ್ನು ನಿಯೋಜನೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ
ನಾಯಕನಹಟ್ಟಿ :: ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದಾಪುರ ಗ್ರಾಮಕ್ಕೆ ನೂತನ ಆಶಾ ಕಾರ್ಯಕತೆಯನ್ನು ನಿಯೋಜನೆ ಮಾಡುವಂತೆ ಗ್ರಾಮದಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಹಿಂದೆ ಗ್ರಾಮಕ್ಕೆ ಆಶಾ ಕಾರ್ಯಕರ್ತೆಯನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಅವರು ಅನಾರೋಗ್ಯದಿಂದ ಒಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಮದಲ್ಲಿ ಸಾರ್ವಜನಿಕರಿಗೆ, ಗರ್ಭಿಣಿನಿಯರಿಗೆ ಆರೋಗ್ಯದ ಕುರಿತು ಮಾಹಿತಿ ನೀಡುವವರಿಲ್ಲ. ಗ್ರಾಮದಲ್ಲಿ ೧ ಸಾವಿರ ಜನ ಸಂಖ್ಯೆ ಇದ್ದರು ಆಶಾಕಾರ್ಯಕರ್ತೆಯರಿಲ್ಲ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ನೂತನ ಆಶಾಕಾರ್ಯಕರ್ತೆಯನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಮತ್ತು ಸಾರ್ವಜನಿಕರ ಮಧ್ಯದಲ್ಲಿ ಸೇತುವೆಯಂತೆ ಕೆಲಸ ಮಾಡುವರು ಆಶಾಕಾರ್ಯಕರ್ತೆಯರು, ಇವರು ಗರ್ಭಿಯರ ಕುಂದು-ಕೊರತೆಗಳನ್ನು ಆಲಿಸಿ, ಆರೋಗ್ಯ ಇಲಾಖೆ ಮಾಹಿತಿ ನೀಡುವವರು, ಗ್ರಾಮದಲ್ಲಿ ಒಂದು ವರ್ಷಗಳಿಂದ ಆಶಾಕಾರ್ಯಕರ್ತೆ ಅನಾರೋಗ್ಯದಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಮಕ್ಕೆ ನೂತನ ಆಶಾಕಾರ್ಯಕರ್ತೆ ನಿಯೋಜನೆ ಮಾಡಬೇಕು ಎಂದು ಗ್ರಾಮಸ್ಥರಾದ ಬಿ.ಸಿ.ಶ್ರೀನಿವಾಸ್, ಎಂ.ಬಿ. ಮಲ್ಲೇಶ್, ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಲೋಲಮ್ಮ, ಓ. ಬೋರಮ್ಮ, ಜಮುನಮ್ಮ, ಅನುಸೂಯಮ್ಮ, ವಿ.ಕೆ. ಮಂಜಣ್ಣ, ನಾಗೇಂದ್ರಪ್ಪ, ತಿಪ್ಪೇಶ್, ಶಿವರಾಜ್ ಸೇರಿದಂತೆ ಮುಂತಾದವರು ಇದ್ದರು