ಚಳ್ಳಕೆರೆ : ಹೆಣ್ಣು ಮನಸ್ಸು ಮಾಡಿದರೆ ಸಾಧಿಸದೆ ಛಲ ಬಿಡಲು ಎಂಬುದಕ್ಕೆ ರಾಜ್ಯ ಪ್ರಶಸ್ತಿ ವಿಜೇತರಾದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಯಾದ ಶಾಂತಕುಮಾರಿ ನೈಜ ನಿದರ್ಶನ ಎಂದು ಮಹಿಳೆಯೆರ ಸ್ಥಿರ ಮನಸ್ಥಿತಿಯನ್ನು ಕುರಿತು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಸ.ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕ ವಸಂತಕುಮಾರ್ ಹೇಳಿದರು.
ತಾಲೂಕಿನ ದೊಡ್ಡೆರಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಭಿರಾರ್ಥಿಗಳ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ ಮುಂದುವರೆಯಬೇಕೆನ್ನುವ ಮಹಿಳೆಯರು, ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆ ರೂಡಿಸಿಕೊಳ್ಳುತ್ತಾ ಸಾರ್ಥಕ ಬದುಕನ್ನು ರೂಪಿಸಿಕೊಳ್ಳುವ ಅನಿವಾರ್ಯವಿದೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾದ ನಿವೃತ್ತ ಪ್ರಾಚಾರ್ಯ ಮೂಡಲಗಿರಿಯಪ್ಪ ಮಾತನಾಡಿ, ಎನ್‌ಎಸ್‌ಎಸ್‌ಗೆ ಬಂದಿರುವ ರಾಜ್ಯ ಪ್ರಶಸ್ತಿ ಇಡೀ ಚಳ್ಳಕೆರೆ ತಾಲೂಕಿಗೆ ಸಂದ ಗೌರವ ಎಂದು ಹೇಳುತ್ತಾ ಬುಡಕಟ್ಟು ಜನಾಂಗಗಳಲ್ಲಿ ಮೌಡ್ಯ ಬೇರುಬಿಟ್ಟಿದೆ, ಅದನ್ನು ತೊಲಗಿಸಲು ಶಿಬಿರಾರ್ಥಿಗಳು ಕೈಜೋಡಿಸಬೇಕು, ತಾವೂ ಕೂಡ ತಮ್ಮ ತಮ್ಮ ಮನೆಗಳಲ್ಲಿ, ಊರುಗಳಲ್ಲಿ, ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಆರ್ ಸಿರಿಗೊಂಡಪ್ಪ ಗ್ರಾ.ಪಂ.ಸದಸ್ಯರು ಹಾಗೂ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಾಂತಕುಮಾರಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣ ಜಿಕೆ, ಗ್ರಾಮ ಪಂಚಾಯತಿ ಸದಸ್ಯ ಎಸ್.ಶಿವಣ, ಗುಂಡಣ್ಣ ದೊಡ್ಡೇರಿ, ಹುಲಿಕುಂಟೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಕ್ಯಾತಣ್ಣ, ಹನುಮಂತರಾಜು ಉಪಸ್ಥಿತರಿದ್ದರು