ಚಳ್ಳಕೆರೆ
ನಮ್ಮ ಚಳ್ಳಕೆರೆ ಟಿವಿ ವರದಿಗೆ ಎಚ್ಚೆತ್ತು ಚರಂಡಿ ಸ್ವಚ್ಛತೆ ಮಾಡಿಸಲು ಮುಂದಾದ ಅಧಿಕಾರಿಗಳು
ನಮ್ಮ ಚಳ್ಳಕೆರೆ ಟಿವಿ ಫಲಶೃತಿ ವರದಿ
ಚಳ್ಳಕೆರೆ. ತಾಲೂಕಿನ ಜಾಜುರು ಗ್ರಾ.ಪಂಚಾಯತಿ ವ್ಯಾಪ್ತಿಯ ಕಾಮಸಮುದ್ರ ಗ್ರಾಮದಲ್ಲಿ ಸರಿಯಾಗಿ ಚರಂಡಿ ಸ್ವಚ್ಛತೆ ಮಾಡಿಸದೆ ಇರುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿಯಿಂದ ಗ್ರಾಮಸ್ಥರು ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ. ಎಂಬುದನ್ನು ನಾಲ್ಕು ದಿನಗಳ ಹಿಂದೆ ನಮ್ಮ ಚಳ್ಳಕೆರೆ ಟಿವಿ ವರದಿ ಬಿತ್ತರಿಸಿದ್ದು ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಚರಂಡಿ ಸ್ವಚ್ಛತೆ ಮಾಡಿಸಲು ಮುಂದಾಗಿದ್ದಾರೆ.
ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿಸುವಂತೆ ಗ್ರಾ.ಪ. ಅಧಿಕಾರಿಗಳಿಗೆ ದೂರು ನೀಡಿದರೆ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇದರಿಂದ ಗ್ರಾಮದಲ್ಲಿ ಜನರು ಪ್ರತಿನಿತ್ಯ ಚರಂಡಿಯ ದುರ್ವಾಸನೆಯಿಂದ ಅಕ್ಕ ಪಕ್ಕದ ಮನೆಯವರು ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ. ಹಾಗೂ ಸೊಳ್ಳೆಗಳ ಕಾಟದಿಂದ ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಸಾಂಕ್ರಾಮಿಕ ರೋಗ ಹರಡುತ್ತಿವೆ. ಮತ್ತು ಚರಂಡಿಯನ್ನು ಸರಿಯಾಗಿ ನಿರ್ಮಿಸದೆ ಇರುವುದರಿಂದ ಚರಂಡಿಗೆ ಹೋಗುವ ನೀರು ರಸ್ತೆಯ ಮೇಲೆ ಹರಿದು ರಸ್ತೆಗಳೆಲ್ಲ ಕೆಸರು ಕೆಸರುಗದ್ದೆಯಂತಾಗಿವೆ. ಇರುವ ಚರಂಡಿಗಳನ್ನು ಒಂದು ವರ್ಷವಾದರೂ ಸ್ವಚ್ಛತೆ ಮಾಡಿಸದೆ ಇರುವುದರಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭಯದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಗ್ರಾಮದ ಆರೋಪಿಸಿದ್ದರು.
ಹಾಗೂ ಚರಂಡಿ ಅವ್ಯವಸ್ಥೆಯಿಂದ ಚರಂಡಿ ತುಂಬಾ ಹುಳುಗಳು ತುಂಬಿ ತ್ಯಾಜ್ಯ ವಸ್ತುಗಳಿಂದ ಕೂಡಿರುವುದರಿಂದ ಗ್ರಾಮದಲ್ಲಿ ಜ್ವರ, ಕೆಮ್ಮು, ನೆಗಡಿ, ಟೈಪೆಡ್, ಕಾಲರ, ಡೆಂಗ್ಯೂ, ಇನ್ನಿತರೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತಿವೆ ಇದರಿಂದ ಪ್ರತಿನಿತ್ಯ 40ರಿಂದ 50 ಜನರು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ ಎಂದು ನಮ್ಮ ಚಳ್ಳಕೆರೆ ಟಿವಿ ವರದಿ ಬಿತ್ತರಿಸಿದ್ದು ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿಸಲು ಮುಂದಾಗಿದ್ದಾರೆ. ಈ ಸುದ್ದಿ ಬಿತ್ತರಿಸಿದ ನಮ್ಮ ಚಳ್ಳಕೆರೆ ಟಿವಿ ವರದಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.