ಚಳ್ಳಕೆರೆ ವಿದ್ಯುತ್ ತಂತಿ ತುಂಡಾಗಿ ಹುಲ್ಲು ಬಣವೆ ಸುಟ್ಟಿರುವ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ಸುಮಾರು18 ಗಂಟೆ ಕಳೆದರೂ ಯಾರೂ ಇತ್ತ ಇಣಿಕಿ ನೋಡಿಲ್ಲ ಎಂದು ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ದ ಅಕ್ರೋಶ ಹೊರ ಹಾಕಿದ್ದಾರೆ.
ಹೌದು ಇದು ತಳಕು ಹೋಬಳಿ ವ್ಯಾಪ್ತಿಯ ದೇವರೆಡ್ಡಿಹಳ್ಳಿ ಗ್ರಾಮದ ಕೆ.ವಿ.ಮಲ್ಲಾರೆಡ್ಡಿ ಮನೆ ಬಳಿ ಅತಿ ಹೆಚ್ಚು ಸಾಮಾರ್ಥ್ಯಹೊಂದಿದ ವಿದ್ಯು ಪವರ್ ಸರಬರಾಜ್ ಲೈನ್ ಹಾದು ಹೋಗಿದ್ದು ಗುರುವಾರ ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ವಿದ್ಯುತ್ ಬಂದ ತಕ್ಷಣ ವಿದ್ಯುತ್ ತಂತಿ ಹರಿದು ಬಿದ್ದ ಕಾರಣ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದೆ ಸ್ಥಳಿಯರು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಇದೆ ಸ್ಥಳದಲ್ಲಿ ಮಕ್ಕಳು ಮರಿ ಆಟವಾಡುತ್ತಾರೆ. ಸಾರ್ವಜನಿಕರು ಓಡಾಡುತ್ತಾರೆ. ಮನೆಗಳಿವೆ ವಿದ್ಯುತ್ ಅವಘಡಕ್ಕೆ ತುತ್ರಾಗಿ ಪ್ರಾಣ ಕಳೆದುಕೊಂಡರೆ ಯಾರು ಹೊಣೆ? ಸತ್ತಮೇಲೆ ಬಂದು ಹೂವಿನ ಹಾರ ಹಾಕಿ ಸಾಂತ್ವನ ಹೇಳಲು ಬರುತ್ತಾರೆಯೇ.?. ವಿದ್ಯುತ್ ತಂತಿ ಹರಿದಿರುವ ಬಗ್ಗೆ ಬೆಸ್ಕಾಂ ಇಲಾಖೆ ಗಮನೆ ಸೆಳೆದರೂ ಸ್ಥಳಕ್ಕೆ ಬಾರದೆ ನಮಗೆ ಕೆಲಸ ಇದೆ ಎಂದು ಉಡಾಪೆ ಉತ್ತರ ನೀಡಿದ್ದಾರೆ ವಿದ್ಯುತ್ ತಂತಿ ಹರಿದು ಅವಘಡ ಸಂಭವಿದ್ದರೂ ಇದುವರೆಗೂ ಸ್ಥಳಕ್ಕೆ ಯಾವ ಅಧಿಕಾರಿಗಳು ಬಂದಿಲ್ಲ ಇದೇ ಸ್ಥಳದಲ್ಲಿ ಎರಡನೇ ಬಾರಿಗೆ ವಿದ್ಯುತ್ ತಂತಿ ತುಂಡಾಗಿರುವ ಘಟನೆ ನಡೆದಿದೆ ಬೆಸ್ಕಾಂ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡರಾಗಿದ್ದಾರೆ ವಿದ್ಯುತ್ ಅವಘಟಕ್ಜೆ ಸಿಲುಕಿ ಜನರ ಪ್ರಾಣ ಹೋಗುವ ಮುನ್ನ ಪದೇ ಪದೇ ವಿದ್ಯುತ್ ತಂತಿ ತುಂಡಾಗಿವುದನ್ನು ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.