ವರದಿ : ರಾಮುದೊಡ್ಮನೆ
ಚಳ್ಳಕೆರೆ : ಶರವನ್ನರಾತ್ರಿ ವಿಜಯ ದಶಮಿ ಅಂಗವಾಗಿ ನಾಡಿನಲ್ಲಿ ಈ ಬಾರಿಯ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ
ಅದರಂತೆ ನಾಡ ದೇವತೆ ಚಾಮುಂಡೇಶ್ವರಿ ದೇವಿ ಆರಾಧನೆಗೆ ಸಕಲು ಭಕ್ತ ಸಂಕುಲ ಇಷ್ಟಕಾರ್ಪಣ್ಯಗಳ ಮೂಲಕ ನಾಡಿನೆಲ್ಲೆಡೆ ಆಯುಧ ಪೂಜೆ ಹಬ್ಬದ ಸಂಭ್ರಮ ಮನೆ ಮಾಡಿದೆ.
ಅದರಂತೆ ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ದೇವಿ ಆರಾದನೆಗೆ ಏನು ಕಮ್ಮಿ ಇಲ್ಲವಂತೆ ಹೂ, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ನಗರದ ನೆಹರು ವೃತ್ತದಲ್ಲಿ
ತರಕಾರಿ ಮಾರುಕಟ್ಟೆ ಸೇರಿದಂತೆ ಮುಖ್ಯರಸ್ತೆಯಲ್ಲಿ ಕ್ಕಿಕ್ಕಿರಿದ ಜನರು ಬಾಳೆ ಕಂದು, ಹೂವು, ಬಾಳೆ ಎಲೆ, ಕುಂಬಳಕಾಯಿ ಈಗೆ ಧೇವಿ ಆರಾದನೇಗೆ ಬೇಕಾದ ಎಲ್ಲಾ ಹೂ, ಹಣ್ಣು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ಇನ್ನೂ ದರ ಕೊಂಚ ಏರಿಕೆಯಾದರೂ ಲೆಕ್ಕಿಸದ ಜನರು ಆಯಧ ಪೂಜೆಯ ಸಾಮಗ್ರಿಗಳಿಗೆ ಮುಗಿ ಬಿದ್ದಿದ್ದಾರೆ.
ಇನ್ನೂ ಇದನೇ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ಡಿಮ್ಯಾಂಡ್ ಹೆಚ್ಚಿಸಿ ಕೊಂಚ ಲಾಭದಲ್ಲಿ ಮಾರಟ ಮಾಡಿದರು.
ಇನ್ನೂ ತಾಲೂಕಿನಾದ್ಯಂತ ಆಯುಧಪೂಜೆ, ವಿಜಯದಶಮಿಗೆ ಅಂಗವಾಗಿ ಗ್ರಾಮೀಣ ಪ್ರದೇಶಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಿದು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಸವಾಗಿದೆ.
ಗ್ರಾಮೀಣ ಭಾಗದ ಸಾರಿಗೆ ಬಸ್ಸು ಗಳಿಗಾಗಿ ಕಾದು ಸುಸ್ತಾದ ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನವರಾತ್ರಿ ಗೆ ಕಳೆದ ಮೂರು ದಿನಗಳಿಂದ ತಯಾರಿ ನಡೆಸಿದ ಭಕ್ತರು ಭಾನುವಾರ, ಹಾಗೂ ಸೋಮವಾರ ಕೊನೆಯ ದಿನ ಮುಂಜಾನೆ ನಗರದ ಪ್ರಮುಖ ಬಿದಿಗಳಲ್ಲಿ ವ್ಯಾಪಾರ ವಹಿವಾಟು ನಡೆಸಿದರು.
ಹೂವು, ಬಾಳೆ, ಬೂದುಗುಂಬುಳಕಾಯಿ, ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಏರಿದ ಬೆಲೆ, ಗ್ರಾಹಕರ ಹಬ್ಬದ ಸಂಭ್ರಮಕ್ಕೆ ಶಾಕ್ ನೀಡಿತ್ತಾದರೂ ಖರೀದಿ ಮಾತ್ರ ಜೋರಾಗಿಯೇ ಇತ್ತು.
ಹೂವಿಗೆ ಬಂಪರ್ ಬೆಲೆ, ರೈತರ ಮೊಗದಲ್ಲಿ ಮಂದಹಾಸ: ಹೂವಿನ ಬೆಲೆ ಇಳಿಮುಖದಿಂದ ಹಾಕಿದ ಬಂಡವಾಳ ಕೈಸೇರದೆ ರೈತರು ಬೆಳೆದ ಹೂವನ್ನು ತಿಪ್ಪೆಗೆ ಸುರಿದ ಬೆನ್ನಲ್ಲೇ ದಸರ ಹಬ್ಬದ ಹಂಗವಾಗಿ ಹೂ ಬೆಳದ ರೈತರಿಗೆ ಶುಕ್ರದೆಶೆ ತಿರುಗಿದೆ. ಈ ಬಾರಿಯ ನವರಾತ್ರಿ ತಾಲೂಕಿನ ಹೂ ಬೆಳೆಗಾರರಿಗೆ ಸಂಭ್ರಮ ಮೂಡಿಸಿದ್ದರೆ, ಗ್ರಾಹಕರಿಗೆ ಜೇಬಿಗೆ ಕತ್ತರಿ . ದುರ್ಗಾಷ್ಟಮಿಯಂದು ತಾಲೂಕಿನ ವಿವಿಧೆಡೆಯಿಂದ ರೈತರು ತಂದಿದ್ದ ಸೇವಂತಿಗೆ , ಗುಲಾಬಿ, ಚೆಂಡು ಹೂ ಜತೆಗೆ ಅಲಂಕಾರಿಕ ಹೂವುಗಳು ಉತ್ತಮ ಬೆಲೆಗೆ ಮಾರಾಟವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಇನ್ನೂ ಈಬಾರಿಯ ದಸರಾ ರೈತನಿಗೆ ವರದಾನವಾಗಿತ್ತು.
ಹೂವು ಬೆಳೆದ ರೈತ ಖುಷಿಯಿಂದ ಹಬ್ಬ ಮಾಡುವ ದಿನವಾಗಿತ್ತು ಇನ್ನೂ ಸೇವಂತಿಗೆ ಮಾರಿಗೋಲ್ಡ್ ಮಾರಿಗೆ 100 ರಿಂದ 150ರೂ. ವರೆಗೆ ಮಾರಾಟವಾಯಿತು. ರಾಜಾವೈಟ್(ಬಿಳಿ ಸೇವಂತಿಗೆ 200ರೂ ಮುಟ್ಟಿತ್ತು. ಚೆಂಡು ಹೂವು 40 ರಿಂದ 50ರೂ. , ರೋಸ್ ನ ವೆರೈಟಿಗಳಾದ ರೂ ಬಿರೆಡ್ ಮೆರಾಬುಲ್ ಮುಂತಾದವು ನೂರೂ ರೂ. ಗಳಿಸಿದವು.
ಚಿಲ್ಲರೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಎಂದು ಸಗಟು ಮಾರಾಟದ ಮಾರುಕಟ್ಟೆಯಲ್ಲಿ ಒಂದೆರಡು ಮಾರು. ಹೂವು ಖರೀದಿಸಲು ಬಂದ ಗ್ರಾಹಕರಂತೂ ಹೂ ಬೆಲೆ ಕೇಳಿ ದಂಗಾಗಿದ್ದಾರೆ. ಐದಾರು ಮಾರು ಕೊಳ್ಳುವ ಹುಮ್ಮಸ್ಸಿನಲ್ಲಿ ಬಂದವರು ಒಂದರೆಡು ಮಾರು ಹೂವು ಕೊಂಡು ತೃಪ್ತಿಪಟ್ಟರು.
ಹೂವಿನ ಮಾರುಕಟ್ಟೆಯಲ್ಲಿ ವಾಹನ ಮತ್ತು ಜನದಟ್ಟಣೆಯಾಗಿದ್ದರಿಂದ ಬೆಂಗಳೂರು,ಬಳ್ಳಾರಿ, ಚಿತ್ರದುರ್ಗ ಹಾಗೂ ಪಾವಗಡ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಒಟ್ಟಾರೆ ಈ ಬಾರಿಯ ದಸರಾ ಆರಾಧನೆಯ ಉತ್ಸವವಾಗಿ ಮಾರ್ಪಟ್ಟಿದೆ.