ಚಳ್ಳಕೆರೆ : ನಗರದ ಪಾವಗಡ ರಸ್ತೆಯ ಹಳೆನಗರದಲ್ಲಿ ನೆಲೆಸಿರುವ ತಿರುಪತಿ ತಿಮ್ಮಪ್ಪನಿಗೆ ವಿಜಯ ದಶಮಿ ಅಂಗವಾಗಿ ಬನ್ನಿ ಮೂಡಿಯುವ ಪೂಜೆಗೆ ಸಕಲ ಭಕ್ತ ವೃಂದ ಸಾಕ್ಷಿಯಾಯಿತು.
ಇನ್ನೂ ನಗರದ ಆರಾಧ್ಯದೈವ ಎಂದೇ ಪೂಜಿಸುವ ಹಳೆನಗರದ ಜನತೆಗೆ ತಿರುಪತಿ ತಿಮ್ಮಪ್ಪ ಬೇಡಿದ ವರವನ್ನು ನೀಡುವ ದೈವವಾಗಿದ್ದಾನೆ.
ಎಂದಿನಂತೆ ಇಂದು ಬನ್ನಿ ಪೂಜೆ ನೆರೆವೆರಿಸುವ ಮೂಲಕ ನಗರ ತಿಮ್ಮಪ್ಪ ನ ಕೃಪೆಗೆ ಪಾತ್ರರಾಗುತ್ತಾರೆ.
ಇದೇ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಾರಣ್ಣ, ಜಯಣ್ಣ, ರಾಮಣ್ಣ, ವೀರಭದ್ರಪ್ಪ, ವೆಂಕಟೇಶ್, ಕಮಕಮ್ಮ, ಮಾರಕ್ಕ, ಶಾಂತಮ್ಮ, ಹಾಗು ಅಪಾರ ಭಕ್ತ ವೃಂದದವರು ಪಾಲ್ಗೊಂಡಿದ್ದರು.