ಚಳ್ಳಕೆರೆ : ವಿವಿಧ ಜಾತಿ ಧರ್ಮ, ವರ್ಗ, ಪಂಥ, ಹಿರಿಯರು ಮತ್ತು ಕಿರಿಯರನ್ನೊಳಗೊಂಡ ಜಾತ್ಯಾತೀತ ಗುಂಪು ಕಂಪಳ ಗೆಳೆಯರ ಬಳಗವಾಗಿದೆ. ಗೆಳೆತನ ಸಂಪತ್ತು ಮತ್ತು ರಕ್ತ ಸಂಬAಧವನ್ನು ಮೀರಿಸಿದ್ದು, ನಮ್ಮ ತಂದೆ ತಾಯಿ ನಮಗೆ ಯಾವುದೇ ಆಸ್ತಿ ಮಾಡಲಿಲ್ಲಿ, ನಮ್ಮನ್ನೇ ಆಸ್ತಿಯನ್ನಾಗಿ ಮಾಡಿದ್ದು, ನಮ್ಮ ಪುಣ್ಯ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ ಹೇಳಿದರು.
ಅವರು ಚಿತ್ರದುರ್ಗ ನಗರದ ಕ್ರೀಡಾ ಸಭಾಂಗಣದಲ್ಲಿ ಕಂಪಳ ಗೆಳೆಯರ ಬಳಗ ಚಿತ್ರದುರ್ಗ ವತಿಯಿಂದ ಏರ್ಪಾಡಿಸಿದ ಹಾಗೂ ಗೆಳೆಯರ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮತ್ತು ರಾಂಪುರ ಎಸ್.ಪಿ.ಎಸ್.ಆರ್ ಪದವಿ ಪೂರ್ವ ಕಾಲೇಜಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಡಾ.ತಿಮ್ಮಣ್ಣನವರು ಬರೆದ “ಚಿತ್ರದುರ್ಗ ಜಿಲ್ಲೆಗೆ ವಿಶೇಷ ರಿಫರೆನ್ಸ್ ನೊಂದಿಗೆ ಮೈಕ್ರೋ-ಪೈನಾನ್ಸ್ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ” ಮತ್ತು “ಭಾರತದಲ್ಲಿ ಸ್ತನ್ಯಪಾನ ಅಭ್ಯಾಸದ ಜ್ಞಾನ” ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು, ನಾವುಗಳು ಮುಂದಿನ ದಿನಗಳಲ್ಲಿ ನಿವೃತ್ತರಿಗೆ ಸನ್ಮಾನದ ಜೊತೆಗೆ ಕ್ರಿಯಾತ್ಮಕ ಕಾರ್ಯಕಲಾಪಗಳನ್ನು ನಮ್ಮ ಬಳಗದ ವತಿಯಿಂದ ಹಮ್ಮಿಕೊಳ್ಳೋಣ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಎಂ.ರೇವಣಸಿದ್ದಪ್ಪನವರನ್ನು ಕಂಪಳ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಸಿದ ಬಿ.ಮಲ್ಲೇಶಪ್ಪ, ನಿವೃತ್ತ ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಚಿಕ್ಕಮಗಳೂರು ಮಾತನಾಡಿ ಯಾವುದೇ ಜಾತಿ, ಧರ್ಮ, ಪಂಥ ಇಲ್ಲದ ಸರ್ವಾಜನಾಂಗದ ನಲ್ಮೀಯ ಕೂಟವೇ ಕಂಪಳ ಗೆಳೆಯರ ಕೂಟ ಎಂದರು. ಪುಸ್ತಕ ಬರೆಯವುದು ತುಂಬ ಕಷ್ಟದ ಕೆಲಸ ಇಂತಹ ಸಂದರ್ಭದಲ್ಲಿ ನನ್ನ ಶಿಷ್ಯ ಡಾ.ತಿಮ್ಮಣ್ಣ ಎರಡು ಕೃತಿಗಳನ್ನು ಬರೆದಿರುವುದು ತುಂಬ ಸಂತೋಷ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಕಂಪಳ ಗೆಳೆಯರ ಬಳಗದ ವತಿಯಿಂದ ನಿವೃತ್ತರಾದ ಎಂ.ರೇವಣಸಿದ್ದಪ್ಪ, ಆರ್.ಚಿದಾನಂದ, ಬಿ.ಆರ್.ರವಿ, ವಿ.ಬಸವರಾಜು, ಬಿ.ನಿರಂಜನ್, ಆರ್.ತಿಮ್ಮಾಭೋವಿ, ಆರ್.ಅಲ್ಕೂರಯ್ಯ (ಆನಂದ್) ಮ್ಯಾಕಲ್ ಬೋರಯ್ಯ, ಬಿ.ಆರ್.ಚಿನ್ನರಾಜು, ಎಸ್.ಟಿ.ವೆಂಕಟೇಶ್, ಶ್ರೀಮತಿ ಪ್ರೇಮ ಕೃಷ್ಣಮೂರ್ತಿ, ಮತ್ತು ರಾಜ್ಯ ಪಠ್ಯ ಪುಸ್ತಕ ಪರಿಷ್ಕೃತಿ ಸಮಿತಿ, ಅಧ್ಯಕ್ಷರಾದ ಡಾ.ಅಂಜಿನಪ್ಪ, ಡಾ.ಮಂಜಣ್ಣ, ಗೃಹ ರಕ್ಷಕದಳದ ಆಡಿಟ್ ಆಫೀಸರ್ ಆರ್.ಪಿ.ಜಯಣ್ಣ, ಕೃತಿಯ ಲೇಖಕ ಡಾ.ತಿಮ್ಮಣ್ಣ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿ.ಅಜ್ಜಪ್ಪ, ಜಂಟಿ ನಿರ್ದೇಶಕರು, ಭೂ ದಾಖಲೆಗಳ ಇಲಾಖೆ ಬೆಂಗಳೂರು. ಎಂ.ಆರ್.ಮAಜುನಾಥ್ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಮಧುಗಿರಿ, ಎಸ್.ಲಕ್ಷ್ಮಣ, ಮಾಜಿ ಅಧ್ಯಕ್ಷರು, ಜಿಲ್ಲಾ ಉಪನ್ಯಾಸಕರ ಸಂಘ, ಚಿತ್ರದುರ್ಗ, ಯುವ ಮುಖಂಡ ಪ್ರತಾಪ್‌ಜೋಗಿ, ಬಿ.ಇ.ಓ ವೆಂಕಟೇಶ್, ಮೊಳಕಾಲ್ಕೂರು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಕುಮಾರಿ, ಚಂದ್ರಶೇಖರ್, ಉಪ ಪ್ರಾಂಶುಪಾಲರು, ಬೆಂಗಳೂರು ಗೃಹ ರಕ್ಷಕದಳದ ಕಛೇರಿ ಆಡಿಟ್ ಆಫೀಸರ್ ಆರ್.ಪಿ.ಜಯಣ್ಣ, ಡಯಟ್ ಉಪನ್ಯಾಸಕ ಆರ್.ನಾಗರಾಜ್, ಉಪನ್ಯಾಸಕ ಜೈಶ್ರೀನಿವಾಸ್, ಅಶೋಕ್, ಹಿಂದಿ ಶಿಕ್ಷಕ ನಾಗರಾಜ್ (ಸದಂ), ವೀರಣ್ಣ ಇತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಮಹಾಲಿಂಗಮ್ಮ ಪ್ರಾರ್ಥಿಸಿದರು, ಉಪನ್ಯಾಸಕ ಜೈ ಶ್ರೀನಿವಾಸ್ ಸ್ವಾಗತಿಸಿದರು, ಡಯಟ್ ಉಪನ್ಯಾಸಕ ಆರ್.ನಾಗರಾಜ್ ಪ್ರಸ್ತಾವಿಕ ನುಡಿ ನುಡಿದರು. ಎಸ್.ಲಕ್ಷ್ಮಣ ವಂದಿಸಿದರು.

Namma Challakere Local News
error: Content is protected !!