ಚಳ್ಳಕೆರೆ: ಒಂದೆ ಮಳೆಗೆ ಕೊಚ್ಚಿ ಹೋಯ್ತು ಕೋಟಿ ರಸ್ತೆ
ಚಳ್ಳಕೆರೆಯ ಮತ್ತು ಆಂಧ್ರದ ಗಡಿಭಾಗಗಳು ಅಭಿವೃದ್ಧಿಯಿಂದ
ವಂಚಿತವಾಗಿವೆ.
ರಸ್ತೆ ಇಲ್ಲದ ಗ್ರಾಮಕ್ಕೆ ಲೋಕೋಪಯೋಗಿ
ಇಲಾಖೆ ಎರಡು ವರ್ಷಗಳ ಹಿಂದೆ ರಸ್ತೆಯನ್ನು ಮಾಡಿತ್ತು. ಚಳ್ಳಕೆರೆ
ಗಡಿಭಾಗದ ಚಿತ್ರನಾಯಕನಹಳ್ಳಿಯಿಂದ ಬೋಗನಹಳ್ಳಿವರೆಗೆ ರಸ್ತೆ
ನಿರ್ಮಾಣ ಮಾಡಿತ್ತು.
ಕೋಟಿ ಹಣ ಖರ್ಚು ಮಾಡಿ ಮಾಡಿದ್ದ
ರಸ್ತೆ ಒಂದೆ ಒಂದು ಮಳೆಗೆ ಕೊಚ್ಚಿ ಹೋಗಿದೆ. ಇಷ್ಟಾದ್ರೂ pwd
ಅಧಿಕಾರಿಗಳು ಇತ್ತ ಕಡೆ ತಿರುಗಿ ನೋಡಿಲ್ಲ. ರಸ್ತೆ ಅರ್ಧ ಭಾಗ
ಕೊಚ್ಚಿ ಹೋಗಿದ್ದು, ಸಾರ್ವಜನಿಕರು ದಿನಿವೂ ನರಕಯಾತನೆ
ಅನುಭವಿಸುತ್ತಿದ್ದಾರೆ.

