ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಮರಗಳ ಮಾರಣಹೋಮ

ಹೌದು ರಸ್ತೆ ಅಗಲೀಕರಣ ನೆಪದಲ್ಲಿ ಸುಮಾರು ವರ್ಷಗಳಿಂದ ಬೆಳೆದು ನಿಂತ ಬೃಹತ್ ಗಾತ್ರದ ಮರಗಳನ್ನು ನೆಲಕ್ಕೆ ಉರುಳಿಸಿವುದು ಚಳ್ಳಕೆರೆ ನಗರದಲ್ಲಿ ಮಾಮೂಲಾಗಿದೆ.

ಅದರಂತೆ ಚಳ್ಳಕೆರೆ ನಗರದ ನೆಹರು ವೃತ್ತದ ನಾಲ್ಕು ದಿಕ್ಕುಗಳಲ್ಲಿ
ಚಿತ್ರದುರ್ಗ ರಸ್ತೆ, ಬಳ್ಳಾರಿ ರಸ್ತೆ, ಪಾವಗಡ ರಸ್ತೆ, ಬೆಂಗಳೂರು ರಸ್ತೆಯಲ್ಲಿ ಇರುವ ಬೃಹತ್ ಗಾತ್ರದ ಮರಗಳನ್ನು ಕಡಿಯುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್ ಬಂತದರೆ ಪರಿಸರ ಉಳಿಸಿ ಕಾಡನ್ನು ಬೆಳೆಸಿ ಎಂಬ ಘೋಷಣೆಗಳು ಮುಳುಗುತ್ತವೆ ಹೊರತು, ಗಿಡಮರಗಳನ್ನು ಉಳಿಸಿ ರಸ್ತೆ, ವಿದ್ಯುತ್ ಕಂಬ ಹಾಕಲು ಸಾಧ್ಯವಿಲ್ಲವೆ ಎಂಬುದು ಪರಿಸರ ವಾದಿಗಳ ಮಾತಾಗಿದೆ.

ರಸ್ತೆ ಕಾಮಗಾರಿ ನೆಪದಲ್ಲಿ ಮರಗಳನ್ನು ಮಾರಣಹೋಮ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ ಅದರಂತೆ ಇಂದು ಬೆಂಗಳೂರು ರಸ್ತೆಯ ಮಾರ್ಗದಲ್ಲಿರುವಂತಹ ಬೃಹತ್ ಗಾತ್ರದ ಹಳೆಯ ಮರಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಮರಗಳನ್ನು ಕಡಿಯುತ್ತಿರುವುದು ಕಂಡು ಬಂದಿದೆ.

ಇನ್ನು ಪರಿಸರ ಪ್ರೇಮಿಗಳು ಮರಗಳ ಮಾರಣಹೋಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!