ನಾಯಕನಹಟ್ಟಿ::ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸಲಾರದೇ ವಿರೋಧ ಪಕ್ಷದ ಬಿಜೆಪಿಯ ಕಾರ್ಯಕರ್ತರು ಶಾಸಕರ ಬಗ್ಗೆ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ ಬೋರನಾಯಕ ಮಾತನಾಡಿ,ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ, ಅಭಿವೃದ್ಧಿಗೆ ಪ್ರತಿಯೊಬ್ಬರು ಸಾಥ್ ನೀಡಬೇಕು ಆದ್ರೆ ಅಭಿವೃದ್ಧಿ ಬಗ್ಗೆ ವಿರೋಧಿ ಮಾಡುತ್ತಾ ಶಾಸಕರನ್ನು ಕಾಲೇಳೆಯುವ ಪ್ರಯತ್ನ ಮಾಡುವುದು ತರವಲ್ಲ,ರಾಜಕಾರಣದಲ್ಲಿ ಎಂದಿಗೂ ಕೂಡ ಅವರು ಭ್ರಷ್ಟಾಚಾರೀ ಎನಿಸಿಕೊಂಡಿಲ್ಲ,ಶಾಸಕರ ಬಗ್ಗೆ ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದರು.

ಕಾಂಗ್ರೆಸ್ ಮುಖಂಡ ಕೆಜಿ ಪ್ರಕಾಶ್ ಮಾತನಾಡಿ, 25 ವರ್ಷಗಳಿಂದ ಬಹಳಷ್ಟು ಹದಗೆಟ್ಟ ಮಲ್ಲೂರಹಟ್ಟಿ, ಜೋಗಿಹಟ್ಟಿ ರಸ್ತೆಯನ್ನು ದುರಸ್ತಿ ಪಡಿಸುವಂತೆ ಶಾಸಕರಿಗೆ ಸ್ಥಳೀಯ ಗ್ರಾಮಸ್ಥರು ಮೊದಲನೇ ಬಾರಿಗೆ ನಮ್ಮ ಗ್ರಾಮಕ್ಕೆ ಆಗಮಿಸಿದ ಶಾಸಕರಿಗೆ ಮನವಿ ಮಾಡಿದ್ದೇವೆ. ಮನವಿ ಮೇರೆಗೆ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶಾಸಕರು ಅವಕಾಶ ಕಲ್ಪಿಸಿದ್ದರು.ತಗ್ಗು ಗುಂಡಿಗಳಿದ್ದ ಈ ರಸ್ತೆಯಲ್ಲಿ ಓಡಾಡಲು ಯಾವುದೇ ವಾಹನಗಳಿಗೆ ಸಾಧ್ಯವಾಗುತ್ತಿರಲಿಲ್ಲ,ಸ್ಥಳೀಯ ಕಷ್ಟ ನೋಡಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಇಚ್ಛಾಶಕ್ತಿ ಮೆರೆದು ರಸ್ತೆ ಕಾಮಗಾರಿಗೆ ಅವಕಾಶ ಕಲ್ಪಿಸಿದ್ದಾರೆ.ರಸ್ತೆಯು ಉತ್ತಮ ಗುಣಮಟ್ಟದಿಂದ ಕೂಡಿದೆ ಆದರೆ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ, ಇದು ಕಿಡಿಗೇಡಿಗಳು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜೋಗಿಹಟ್ಟಿ ಕೆ.ಜಿ. ಮಂಜುನಾಥ್ ಮಾತನಾಡಿ,ಈ ರಸ್ತೆಯ ನಿರ್ಮಾಣ ಗುಣಮಟ್ಟದಿಂದ ಕೂಡಿದೆ, ರಸ್ತೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವವರು ನಮ್ಮ ಗ್ರಾಮದವರೇ ಅಲ್ಲ, ನಮ್ಮ ಶಾಸಕರು ಎಂದಿಗೂ ಲಂಚಕ್ಕೆ ಕೈಹೊಡ್ಡಿದವರಲ್ಲ ರಸ್ತೆಯಿಂದ ಕಿಕ್ ಬ್ಯಾಕ್ ಪಡೆದ್ದಿದ್ದಾರೆ ಎನ್ನುವ ಆರೋಪವನ್ನು ಮಾಡುತ್ತಿರುವ ಬಿಜೆಪಿಯವರು ಶಾಸಕರಿಗೆ ಇರುವ ಹಿರಿತನ ಮತ್ತು ಪ್ರಾಮಾಣಿಕತೆ ಬಗ್ಗೆ ತಿಳಿದು ಮಾತಾಡಲಿ ಎಂದರು.

ಸ್ಥಳದಲ್ಲಿ ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ. ರಂಗಪ್ಪ ಹಾಗೂ ಮ್ಯಾಸರಹಟ್ಟಿ ಮಲ್ಲಿಕಾರ್ಜುನ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಎಸ್ ಸಿ ನಾಗಪ್ಪ ಜೋಗಿಹಟ್ಟಿ, ಕೊಂಡಯ್ಯನಕಪಿಲೆ ಬೋರಣ್ಣ, ರೇಖಲಗೆರೆ ಎ.ಟಿ. ಅಶೋಕ್, ನಾಯಕನಹಟ್ಟಿ ಓಬಳೇಶ್, ಇದ್ದರು

About The Author

Namma Challakere Local News
error: Content is protected !!