ಚಳ್ಳಕೆರೆ : ರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಚಳ್ಳಕೆರೆ ನಗರದ ನಗರಸಭೆ ಮುಂಭಾಗದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನೂರಾರು ಯೋಗ ಪಟಗಳು ಮುಂಜಾನೆಯೇ ಯೋಗ ಅಭ್ಯಾಸದಲ್ಲಿ ತೊಡಗಿದರು‌.

ಇನ್ನು ರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಗೆ ಅಂಗವಾಗಿ ನಗರಸಭೆ ಪ್ರಭಾರಿ ಅಧ್ಯಕ್ಷರಾದ ಕವಿತಾ ಬೋರಯ್ಯನವರು ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು,

ಯೋಗ ಮನುಷ್ಯನಿಗೆ ಅತ್ಯಗತ್ಯ ಯೋಗ ಮಾಡಿದವರಿಗೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ, ಮನುಷ್ಯ ತನ್ನ ಜೀವನದಲ್ಲಿ ಯೋಗ ಅಭ್ಯಾಸವನ್ನು ಹಾಸುಹೊಕ್ಕಾಗಿಸಿಕೊಳ್ಳಬೇಕು ತನ್ನ ದಿನನಿತ್ಯ ಕಾರ್ಯಗಳ ಜೊತೆಗೆ ಯೋಗಭ್ಯಾಸ ಮಾಡುವುದು ಒಳಿತು ಎಂದರು.

ಇದೆ ಸಂದರ್ಭದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಯೋಗ ಗುರುಗಳು, ಹಾಗೂ ನೂರಾರು ಯೋಗ ಪುಟಗಳು, ಸಾರ್ವಜನಿಕರು, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!