ಚಳ್ಳಕೆರೆ : ಇತಿಹಾಸವನ್ನು ಕೆದಕಿದಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಆದರ್ಶವ್ಯಕ್ತಿಗಳು ಕಂಡು ಬರುತ್ತಾರೆ ಅವರ ಆದರ್ಶಗುಣಗಳ ಸವಿಯಲು ಅವರ ಹೆಸರಿನಲ್ಲಿ ಜಯಂತಿಗಳನ್ನು ಆಚರಣೆ ಮಾಡುತ್ತೇವೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನಕಜಯಂತ್ಸೋವ ಕಾರ್ಯಕ್ರಮ ಹಾಗೂ ಶ್ರೀ ಕನಕದಾಸರ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಮಾಜದ ಅಂಕುಡೊಂಕುಗಳನ್ನು ಕೀರ್ತನೆಗಳ ಮೂಲಕ ತಿದ್ದಿದ ಕೀರ್ತನಕಾರರಾದ ಕನಕದಾಸರು, ಪುರಂದರದಾಸರು, ಬಸವಣ್ಣ, ಬುದ್ದ ಇತರ ಮಹಾನ್ ವ್ಯಕ್ತಿಗಳು ಮಾನವೀಯ ಮೌಲ್ಯ ಹಾಗೂ ನೈತಿಕ ಶಿಕ್ಷಣವನ್ನು ಜಗತ್ತಿಗೆ ಸಾರಿದ ಯುಗಪುರುಷರಾಗಿದ್ದಾರೆ, ರಾಜ್ಯದಲ್ಲಿ ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಲುಮತದ ಸಮಾಜ ಯಾವ ರೀತಿಬೆಂಬಲ ನೀಡುತ್ತಿದ್ದೆಯೋ ಅದೇ ರೀತಿಯಲ್ಲಿ ಕಳೆದ ಮೂರು ಬಾರಿ ಶಾಸಕನಾಗಲು ಈ ಸಮಾಜ ಶ್ರಮಿಸಿದೆ ನಿಮ್ಮ ಈ ಋಣ ಮುಂದಿನ ದಿನಗಳಲ್ಲಿ ತೀರಿಸುವೆ, ಈಗೀರುವ ಕನಕ ಭವನವನ್ನು ಸಂಪೂರ್ಣವಾಗಿ ಪೂರೈಸಲಾಗುವುದು ಎಂದರು.
ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ ಮಾತನಾಡಿ, ಕೇವಲ ಕಿರ್ತನೆಗಳ ಮೂಲಕ ಈಡೀ ನಾಡಿನಲ್ಲಿ ಕುರುಬ ಸಮಾಜದ ಹರಿಕಾರನಾದ ಕನಕದಾಸರು ಶೋಷಿತ ಹಿಂದುಳಿದ ವರ್ಗಗಳ ಸಮುದಾಯಗಳು ಮೇಲತ್ತುವ ಕಾರ್ಯದಲ್ಲಿ ತೊಡಗಿದ್ದಾರೆ, ಇಂದಿನ ಆಧುನಿಕ ಕಾಲದಲ್ಲಿ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಈಡೀ ತಾಲೂಕಿನಲ್ಲಿ ಕುರುಬ ಸಮಾಜವನ್ನು ಗುರುತಿಸುವ ಮೂಲಕ ನಮ್ಮ ಸಮಾಜಕ್ಕೆ ರಾಜಾಕೀಯ,ಸಾಮಾಜಿಕ ನ್ಯಾಯ ದೊರಕಿಸುವ ಮೂಲಕ ಸಮುದಾಯಕ್ಕೆ ಕನಕ ಭವನ, ಸ್ತ್ರೀಯರ ಸಾಂಸ್ಕೃತಿಕ ಭವನ, ಕನಕದಾಸರ ವೃತ್ತ ಈಗೇ ಇಡೀ ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಆರ್.ಮಲ್ಲೆಶಪ್ಪ ಮಾತನಾಡಿ ಭಾರತ ಇತಿಹಾಸ ಪುಟಗಳನ್ನು ಕೆದಕಿದಾಗ ಅನೇಕ ಸಂತರು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಸರಕಾರಿ ಜಯಂತಿಗಳು ಅರ್ಥಪೂರ್ಣವಾಗಿ ಆಚರಣೆ ಮಾಡಿದಾಗ ಮಾತ್ರ ಮಹಾನ್ ದಾಸರ ಕೊಡುಗೆಗೆ ಸಾರ್ಧಕವಾಗುತ್ತದೆ ಎಂದ ಅವರು ಜ್ಞಾನ ಯಾವ ವರ್ಗಕ್ಕೆ, ಜಾತಿಗೆ ಸೀಮಿತವಾಗಿಲ್ಲ ಜಾತಿ, ಧರ್ಮಗಳಿಂದ ಆಗದ ಕೆಲಸ ದೈವದಿಂದ ಆಗುತ್ತದೆ ಎಂದು ತೋರಿಸಿಕೊಟ್ಟವರಲ್ಲಿ ಕನಕದಾಸರು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಎಂ.ಶಿವಲಿಂಗಪ್ಪ, ಮಾತನಾಡಿದರು, ಗೊರವನ ಕುಣಿತ, ಹಾಗೂ ವಿವಿಧ ಕಲಾತಂಡಗಳೊಂದಿಗೆ ಎಂ.ಜೆ.ಕುಮಾರ್.
ಈದೇ ಸಂಧರ್ಭದಲ್ಲಿ ಮಾಜಿ ಜಿಪಂ.ಅಧ್ಯಕ್ಷರಾದ ಶಶಿಕಲಾ ಕಂದಿಕೆರೆ ಸುರೇಶ್‌ಬಾಬು, ನಗರಭೆ ಸ್ಥಾಯಿ ಸಮಿತಿ ಮಾಜಿಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸಂಘದ ಅಧ್ಯಕ್ಷ ಆರ್.ಮಲ್ಲೆಶಪ್ಪ, ಮೇಘನ ಜ್ಯೂಯಲರ್ಸ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ. ಜಗದೀಶ್ ಸೂರನಹಳ್ಳಿ , ನಗರಸಭೆ ,
ಸದಸ್ಯ, ರಮೇಶ್ , ಮಹಾಲಿಂಗಪ್ಪ, ತಹಶೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಶಶಿಧರ್, ಬಿಇಒ.ಕೆ.ಎಸ್.ಸುರೇಶ್, ನಗರಸಭೆ ಪೌರಾಯುಕ್ತ ಜಗರೆಡ್ಡಿ, ಅಕ್ಷರದಾಸೋಹ ಮಂಜುನಾಥ್, ಬಿಸಿಎಂ ಅಧಿಕಾರಿ ರಮೇಶ್,, ಸಿಡಿಪಿಓ ರಾಜುನಾಯ್ಕ್, ಸಮಾಜ ಕಲ್ಯಾಣ ಇಲಾಖೆ ಅದಿಕಾರಿ ದೇವ್ಲಾನಾಯ್ಕ್, , ಪಿಐ .ದೇಸಾಯಿ, ಪಿಎಸ್‌ಐ ಶಿವರಾಜ್, ಈರೇಶ್ , ದರೇಪ್ಪ ಬಾಳಪ್ಪ ದೊಡ್ಡಮನಿ, , ಇತರರಿದ್ದರು.

