ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಶಾಸ್ತ್ರದ ಕೌಶಲ ಹೆಚ್ಚಿಸುವ ಉದ್ದೇಶ
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ಮಾಹಿತಿ
‘ಓದು ಕರ್ನಾಟಕ’ ಅನುಷ್ಠಾನದಲ್ಲಿ ಚಿತ್ರದುರ್ಗಕ್ಕೆ ಅಗ್ರಸ್ಥಾನ
ಚಿತ್ರದುರ್ಗ :
ಸರ್ಕಾರಿ ಪ್ರಾಥಮಿಕ ಶಾಲೆಗಳ 4 ಮತ್ತು 5ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಶಾಸ್ತ್ರದ ಕೌಶಲ ಅಭಿವೃದ್ಧಿ ಪಡಿಸಲು “ಓದು ಕರ್ನಾಟಕ” ಎಂಬ ಕಾರ್ಯಕ್ರಮ ಜಾರಿಗೊಳಿಸಿದ್ದು, ಓದು ಕರ್ನಾಟಕ ಅನುಷ್ಠಾನದಲ್ಲಿ ಚಿತ್ರದುರ್ಗ ಜಿಲ್ಲೆಯು ಮುಂಚೂಣೆಯಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.
‘ಓದು ಕರ್ನಾಟಕ’ ಕಾರ್ಯಕ್ರಮವನ್ನು 4 ಮತ್ತು 5 ನೇ ತರಗತಿಯ ಮಕ್ಕಳ ಮೂಲಭೂತ ಭಾμÁ ಮತ್ತು ಗಣಿತ ಕೌಶಲ್ಯಗಳನ್ನು ಸುಧಾರಿಸಲು ಪ್ರಥಮ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವು ಪ್ರಾರಂಭಿಸಿದೆ.
2025-26 ನೇ ಸಾಲಿನಲ್ಲಿ ‘ಓದು ಕರ್ನಾಟಕ’ ಕಾರ್ಯಕ್ರಮವು ರಾಜ್ಯಾದ್ಯಂತ ಮತ್ತೆ ಅನುμÁ್ಠನಗೊಂಡು ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳ 4 ಮತ್ತು 5 ನೇ ತರಗತಿಗಳ ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಶಾಸ್ತ್ರ / Foundational Literacy and Numeracy (FLN) ಕೌಶಲ್ಯಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ.
ಈ ಎಲ್ಲಾ ಬೆಳವಣಿಗೆಗಳು ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ “ಎಡ್ ಲ್ಯಾಬ್”ನ ಫಲಶೃತಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.

