ಚಳ್ಳಕೆರೆ :ಕಾಡುಗೊಲ್ಲರ ಆರಾಧ್ಯ (ಕೇತೇದೇವರ ಜಾತ್ರೋತ್ಸವ) ಕ್ಯಾತಪ್ಪನ ದೈವ ಚನ್ನಮ್ಮನಾಗತಿಹಳ್ಳಿಯ ಕ್ಯಾತೇದೇವರ ಜಾತ್ರೆಯು ಡಿ.೧೮ ರಿಂದ ಜ.೯ರ ನಡೆಯುವ (ಕೇತೇದೇವರ ಜಾತ್ರೋತ್ಸವ) ಜಾತ್ರೆಯು ತನ್ನದೇ ಆದ ವಿಶಿಷ್ಟ ಪರಂಪರೆಯಿಂದ ನಡೆಯುವ ಅತಿದೊಡ್ಡ ಜಾತ್ರೆಯಾಗಿದೆ.
ಈ ದೇವರ ಪರೀಷೆ ಈ ಭಾಗದ ಬುಡಕಟ್ಟು ಸಮುದಾಯಗಳಿಗೆ ಸಂಸ್ಕೃತಿ ಆಚರಣೆಯನ್ನು ಎತ್ತಿ ತೋರುವ ಜಾತ್ರೆಗಳಲ್ಲಿ ಒಂದಾಗಿದೆ.
ಚಿತ್ರದುರ್ಗ ಜಿಲ್ಲೆಯ ತಾಲ್ಲೂಕಿನ ಪುರ‍್ಲೆಹಳ್ಳಿಯ ವಸಲು ದಿನ್ನೆಬ್ಬದಲ್ಲಿ ನಡೆಯುವ ಜಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಪಾರಂಪರಿಕವಾಗಿ ಆಚರಣೆಯಲ್ಲಿರುವ ಸಂಪ್ರದಾಯಗಳನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಆಧುನಿಕತೆಯ ಭರಾಟೆಯಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ನಡೆಯುತ್ತದೆ…
ಒಟ್ಟಾರೆಯಾಗಿ ಸಾಂಪ್ರದಾಯಿಕ ಆಚರಣೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುವ ಸಂದರ್ಭದಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡಕಟ್ಟು ಸಮುದಾಯದ ಕಾಡುಗೊಲ್ಲರು ವಿಶಿಷ್ಟ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಎನ್ನಬಹುದಾಗಿದೆ…
ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಇಂದಿಗೂ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯದಿಂದ ಕೂಡಿದೆ. ಈ ದೇವರ ಜಾತ್ರೆಗೆ ನೆರೆ ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸುವುದು ಮತ್ತೊಂದು ವಿಶೇಷವಾಗಿದೆ…
ಚನ್ನಮ್ಮನಾಗತಿಹಳ್ಳಿಯ ಕೇತೇ ದೇವಸ್ಥಾನದಿಂದ ಕಳಶ ಹೊತ್ತು ತಂದು ಎರದ(ಬಾರೆ),ಬಂದ್ರೆ, ಬ್ಯಾಟೆ,ತುಗ್ಗಲಿ ಇತ್ಯಾದಿ ಕಳ್ಳೆ ಮುಳ್ಳುಗಳಿಂದ ಸಿದ್ದ ಮಾಡಿದ ಕ್ಯಾತಪ್ಪನ ಗುಡಿಯ ಮೇಲೆ ಕೊಣನ ಗೊಲ್ಲ ಮತ್ತು ಬೊಮ್ಮನ ಗೊಲ್ಲರ ಅಣ್ಣತಮ್ಮಂದಿರ ಒಬ್ಬಬ್ಬರನ್ನು ಆಯ್ಕೆ ಮಾಡಿ ಕಳಶ ಇಡಲು ಅವಕಾಶ ನೀಡಲಾಗುತ್ತದೆ.ಇಲ್ಲಿ ದೇವರಿಗೆ ಸಂಬಂದಿಸಿದ ಹಲವಾರು ರೀತಿಯ ಪೂಜಾ ವಿಧಾನಗಳು ವಿಶೇಷವಾಗಿ ನಡೆಯುತ್ತವೆ ..
ಇಂದು ಬಾರೆ ಕಳ್ಳೆ ಗುಡಿ ನಿರ್ಮಾಣ ಕಾರ್ಯ ಸಂಭ್ರಮದಿಂದ ಜರುಗಿತು…

