ಚಳ್ಳಕೆರೆ :ಚಿತ್ರದುರ್ಗ: ಅಡ್ಡಪಲ್ಲಕ್ಕಿ ಉತ್ಸವ ಕಣ್ಣುಂಬಿಕೊಂಡ
ಭಕ್ತರು
ದಸರಾದ ವಿಜಯದಶಮಿ ಮುಗಿದ ಮಾರನೆಯ ದಿನವಾದ
ಇಂದು ಚಿತ್ರದುರ್ಗ ಮುರುಘಾ ಮಠದಲ್ಲಿ ಅಡ್ಡಪಲ್ಲಕ್ಕಿ ಉತ್ಸವ
ನಡೆಯಿತು. ಈ ಉತ್ಸವದಲ್ಲಿ ಪಲ್ಲಕ್ಕಿಯಲ್ಲಿ ಬಸವಣ್ಣ ಹಾಗೂ
ಅಲ್ಲಮಪ್ರಭುರವರ ಭಾವಚಿತ್ರ ಮತ್ತು ವಚನಗಳ ಪುಸ್ತಕವಿಟ್ಟು
ಭಕ್ತರು ಮಠದ ಆವರಣದಲ್ಲಿ ಮೆರವಣಿಗೆ ಮಾಡಿದರು. ನಂತರ
ಪಲ್ಲಕ್ಕಿಯನ್ನಯ ಮಠದ ರಾಜಾಂಗಣದ ಮುಖ್ಯ ದ್ವಾರದಲ್ಲಿ ಅಡ್ಡ
ಪಲ್ಲಕ್ಕಿ ಉತ್ಸವ ಕೊನೆಗೊಂಡಿತು. ಇದನ್ನು ವೀಕ್ಷಸಲು ರಾಜ್ಯದ
ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದರು.

