ರಕ್ತದಾನ ಶ್ರೇಷ್ಟವಾದ ದಾನ ಎಂ ವೈ ಟಿ ಸ್ವಾಮಿ

ನಾಯಕನಹಟ್ಟಿ : ಪಟ್ಟಣದ ಕೋಟೆ ಬ್ಲಾಕ್‌ ಗೆಳೆಯರ ಬಳಗದಿಂದ ಗಣೇಶ್ಶೋತ್ಸವ ಪ್ರಯುಕ್ತ ರಕ್ತದಾನ ಹಮ್ಮಿಕೋಂಡಿರೊದು ಪುಣ್ಯದ ಕೆಲಸ ಎಂದು ಮುಖಂಡ ಎಂ ವೈಟಿ ಸ್ವಾಮಿ ಹೇಳಿದರು.
ಸೋಮುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಓಳ ಮಠದ ಮುಂಬಾಗದ ಸಂವೃದ್ದಿ ಸೆಲೆಬ್ರೇಶನ್‌ ಹಾಲ್‌ ನಲ್ಲಿ ಶ್ರೀ ಗಣೇಶೋತ್ಸವ ಅಂಗವಾಗಿ ಕೋಟೆ ಬ್ಲಾಕ್‌ ಗೆಳೆಯರ ಬಳಗದ ವತಿಂದ ಜಿಲ್ಲಾ ರಕ್ತನಿದಿ ಕೇಂದ್ರ ಚಿತ್ರದುರ್ಗ ಸಮುದಾಯ ಆರೋಗ್ಯ ಕೇಂದ್ರರ ನಾಯಕನಹಟ್ಟಿ ಇವರ ಸಹಯೋಗದಲ್ಲಿ ಹಮ್ಮೀಕೋಂಡಿದ ರಕ್ತದಾನ ಶೀಬಿರಕ್ಕೆ ಚಲನೆ ನೀಡಿ ಮಾತನಾಡಿದರು ನಮ್ಮ ಭಾರತ ದೇಶದಲ್ಲಿ ರಕ್ತ ಹಿನತೆಯಿಣದ ಸಾಕಷ್ಟು ಜನ ಬಳಲುತ್ತಿದ್ದಾರೆ ಹೇರಿಗೆ, ಅಪಘಾತ ಸಮಯದಲ್ಲಿ ರಕ್ತವಿಲ್ಲದೆ ದೇಶದಲ್ಲಿ ಅನೇಕ ಜನ ಸಾವನ್ನು ಅಪ್ಪುತ್ತಿದ್ದಾರೆ ಪಟ್ಟಣದ ಕೋಟೆ ಬ್ಲಾಕ್‌ ಗೆಳೆಯರ ಬಳಗ ರಕ್ತದಾನ ಶಿಭೀರಕ್ಕೆ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಮೂಲಕ ಪ್ರೇರಣೆ ಆಗಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್ ಮಾತಾನಾಡಿದರು ದಾನಗಳಲ್ಲಿ ಶ್ರೇಷ್ಢವಾದ ದಾನ ರಕ್ತದಾನ ಯಾವುದೇ ಒಬ್ಬ ವ್ಯಕ್ತಿ ಪೌಷ್ಠಿಕಾಂಶ ಉಳ್ಳ ಮತ್ತು ಆರೋಗ್ಯವಂತ ವ್ಯಕ್ತಿ ಇಂದ ಮಾತ್ರ ರಕ್ತ ಸಂಗ್ರಹ ಮಾಡಲು ಸಾದ್ಯ ಎಂದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತಾನಾಡಿದರು ಗಣೇಶೊಸ್ತವದಲ್ಲಿ ಯುವಕರು ಮೋಜು ಮಸ್ತಿ ಡಿ.ಜೆ ಹಾಡು ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಾರೆ ಆದರೆ ನಾಯಕನಹಟ್ಟಿ ಕೋಟೆ ಬ್ಲಾಕ್‌ ಗೆಳೆಯರ ಬಳಗದವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ರಕ್ತದಾನ ಶಿಭೀರ ಅಯೋಜಿಸಿರುವುದು ತುಂಬಾ ಉತ್ತಮವಾದ ಕೆಲಸ ಬಾಲಗಂಗಧರ್‌ ತಿಲಕ್‌ ಅವರು ಗಣೇಶ ಹಬ್ಬ ಆಚರಣೆ ಮಾಡಲು ಜನರನ್ನು ಒಗ್ಗುಡಿಸಲು ಮತ್ತು ಭಕ್ತಿಭಾವ ಮೂಡಿಸಲು ಎಂದರು
ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್. ರವಿಕುಮಾರ್‌ ಮಾತನಾಡಿದರು ಯುವಕರು ರಕ್ತ ಕೊಟ್ಟರೆ ರಕ್ತ ಕಡಿಮೆಯಾಗುತ್ತದೆ ಎನ್ನುಬ ಭಯ ಬೇಡ ರಕ್ತ ರುದ್ದಿ ಆಗುತ್ತದೆ ಕೋಟೆ ಬ್ಲಾಕ್‌ ಗೆಳೆಯರ ಬಳಗದವರು ರಕ್ತ ದಾನ ಶಿಭಿರ ಯಶಸ್ವಿಯಾಗಲಿ ಎಂದು ಶುಭ ಆರೈಸಿದರು
ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಸಿನಿ ವಿನುತಾ ಮುಖಂಡ ತಿಪ್ಪೆರುದ್ರಪ್ಪ ಬಿ.ಜೆ.ಪಿ ಎಸ್.ಟಿ ಮೊರ್ಚ ಜಿಲ್ಲಾಧ್ಯಕ್ಷ ಪಿ ಶಿವಣ್ಣ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂಧಿ ಎಸ್‌ ಸತೀಶ್‌ , ಮಹೇಶ್‌ ಹಾಗೂ ಜಿಲ್ಲಾ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ನಾಯಕನಹಟ್ಟಿ ಪಟ್ಟಣ ಕೋಟೆ ಬ್ಲಾಕ್‌ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!