ಚಳ್ಳಕೆರೆ :
ಚಳ್ಳಕೆರೆ: ಲೋಡ್ ಶೆಡ್ಡಿಂಗ್ ರದ್ದುಗೊಳಿಸುವಂತೆ
ಒತ್ತಾಯಿಸಿ ಪ್ರತಿಭಟನೆ
ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ
10 ಗಂಟೆಯವರೆಗೆ ಬೆಸ್ಕಾಂ ಇಲಾಖೆ ನಿರಂತರ ಲೋಡ್
ಶೆಡ್ಡಿಂಗ್ ಮಾಡುತ್ತಿದ್ದು, ಇದರಿಂದ ರೈತರಿಗೆ ಹಾಗೂ
ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಜಯಾನಂದ
ಮೂರ್ತಿ ಸೆಂಟರ್ ನ ನಿವಾಸಿಗಳು ಬೆಸ್ಕಾಂ ಇಲಾಖೆಯ
ಕಾರ್ಯನಿರ್ವಹಣಾಧಿಕಾರಿಗಳಿಗೆ ನಿನ್ನೆ ಮನವಿ ಸಲ್ಲಿಸಿದ್ದಾರೆ.
ನಗರದ ಬೆಸ್ಕಾಂ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ
ನಿವಾಸಿಗಳು ಲೋಡ್ ಶೆಡ್ಡಿಂಗ್ ಮಾಡದಂತೆ ಒತ್ತಾಯಿಸಿದ್ದಾರೆ.

