“ಶಾರದಾಮಾತೆಯವರದು ವಿಶ್ವವ ತಬ್ಬುವ ವಾತ್ಸಲ್ಯ”:-ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ
ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರದು ವಿಶ್ವವ ತಬ್ಬುವ ವಾತ್ಸಲ್ಯ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯ ಪಟ್ಟರು.ವಾಲ್ಮೀಕಿ ನಗರದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ಸಹ್ಯಾದ್ರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀರಾಮರಕ್ಷಾ ಸ್ತೋತ್ರ”ಪಠಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಈ ಸತ್ಸಂಗದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ,ಲಕ್ಷ್ಮೀದೇವಮ್ಮ, ಗಿರಿಜಾಮ್ಮ, ಬಿ.ಟಿ.ಗಂಗಾಂಬಿಕೆ, ಸುಜಾತ,ಸಿದ್ದಮ್ಮ, ಯತೀಶ್ ಎಂ ಸಿದ್ದಾಪುರ,ತಿಪ್ಪಮ್ಮ , ಮೋಹಿನಿ,ಗಿರಿಜಾ ಜಗದೀಶ್, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಪಾಲ್ಗೊಂಡಿದ್ದರು.

