11 ಕುರಿ ಮೇಕೆ ಕಳ್ಳತನ ಬೆಚ್ಚಿಬಿದ್ದ ಗ್ರಾಮಸ್ಥರು..

ನಾಯಕನಹಟ್ಟಿ-: ಮನೆ ಮುಂದೆ ಮೇವಿಗೆಂದು ಕಟ್ಟಿಕೊಂಡಿದ್ದ ಕುರಿ ಹಾಗೂ ಮೇಕೆ ಓತಗಳನ್ನ ಕಳ್ಳತನ ಮಾಡಿರುವ ಘಟನೆ ಗುರುವಾರ ತಡ ರಾತ್ರಿ ನಡೆದಿದೆ..

ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ತಿಕೆಯ್ಯನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ..

ಗ್ರಾಮದ ನಾಗರಾಜ್ ಎನ್ನುವ ರೈತ 50 ಕುರಿಗಳನ್ನ ಸಾಕಾಣಿಕೆ ಮಾಡಿಕೊಂಡು ಜೀವ ಸಾಗಿಸುತ್ತಿದ್ದ. ಇದರಲ್ಲಿ 11 ಟಗರು ಹಾಗೂ ಮೇಕೆ ಓತಗಳನ್ನ ‌ಮನೆಯ ಮುಂದಿ ರಾತ್ರಿ ಮೇವಿಗಾಗಿ ಕಟ್ಟಿಕೊಂಡಿದ್ದ ಕರಿಗಳನ್ನ ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ..

ರೈತ ನಾಗರಾಜು ಜಮೀನಿಗೆ ಹೋಗಿ ರಾತ್ರಿ 2 ರ ಸಮಯದಲ್ಲಿ ಸಮಯದಲ್ಲಿ ಮನೆಗೆ ಬಂದು ನೋಡಿದಾಗ ಮನೆ ಮುಂದೆ ಇದ್ದ ಕುರಿಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ರೈತ ತಕ್ಷಣವೇ ನಾಯಕನಹಟ್ಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಾಯಕನಹಟ್ಟಿ ಪಿಎಸ್ ಐ .
ಜಿ.ಪಾಡುರಂಗಪ್ಪ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ….

About The Author

Namma Challakere Local News
error: Content is protected !!