“ಶಿವನಗರದ ಗಣೇಶನ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು”.
ಚಳ್ಳಕೆರೆ:-ನಗರದ ಶಿವನಗರದಲ್ಲಿ ಶ್ರೀಶಿವನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೂರಿಸಿರುವ ಶ್ರೀಗಣೇಶ ದೇವರ ಸನ್ನಿಧಿಯಲ್ಲಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದಲ್ಲಿ ಮಕ್ಕಳಿಂದ ಗಣೇಶನ ಭಜನೆಗಳು,ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಠಣ, ಗಣೇಶನ ಕಥೆಗಳು ಮತ್ತು ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳ ಪಠಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರು ಎಲ್ಲಾ ಮಕ್ಕಳಿಗೆ "ಮಕ್ಕಳ ಶಾರದಾದೇವಿ" ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಡಾ.ಕೆ.ಪಿ. ನಾಗಭೂಷಣಶೆಟ್ಟಿ, ಕೊಟ್ರೇಶ್, ಕೆ.ಸಿ.ವೀರೇಶ್, ಜಿ.ವಿ.ಎಸ್ ಪ್ರಕಾಶ್, ಶುಭ ಸುರೇಶ್,ಬಾಬು, ಬಾಲಾಜಿ,ಫಣಿರಾಜ್, ಮಂಜುನಾಥ, ಯತೀಶ್ ಎಂ ಸಿದ್ದಾಪುರ,ಸುಮನಾ ಕೋಟೇಶ್ವರ,ಹರ್ಷಿತಾ, ಪ್ರತೀಕ್ಷಾ,ಮನಸಿರಿ, ಯಶಸ್ವಿ ,ಧ್ರುವ ನಾರಾಯಣ, ನಿಖಿಲೇಶ್, ಕಾರ್ತಿಕ್ ,ಮೋಕ್ಷಿತ್, ಶ್ರೇಯಸ್ಸು ,ವಿನತಿ, ದವನ್, ಯಶಸ್ಸು ,ಯುಕ್ತ ,ಸಹಷ್ರ, ಜಶ್ವಿತ,ಅನುಷ, ಸಮರ್ಥ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

