ಚಳ್ಳಕೆರೆ :

ಚಳ್ಳಕೆರೆ ತಾಲೂಕಿನ ಗೋರ್ಲಕಟ್ಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಏರ್ಪಡಿಸಲಾಗಿತ್ತು.

ಈ ಸಭೆಗೆ ಸಂಘದ ಅಧ್ಯಕ್ಷರಾದ ಬಿ.ನಾಗರಾಜ್ ರವರ ಘನ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು ಮುಖ್ಯ ಅತಿಥಿಗಳಾಗಿ ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿರವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ಪಾದಕರ ಕುಂದುಕೊರತೆಯನ್ನು ಆಲಿಸಿದರು ಮತ್ತು ಸಂಘದ ಅಭಿವೃದ್ಧಿಗೆ ಸಂಘದ ಉತ್ಪಾದಕರು ಹಾಗೂ ಆಡಳಿತ ಮಂಡಳಿಯವರ ಸಹಕಾರದಿಂದ ಹೆಚ್ಚಿನ ಹಾಲು ಉತ್ಪಾದನೆಯ ಗುರಿಹೊಂದಬೇಕು ಹಾಗೂ ಸಂಘಕ್ಕೆ ಮೀಸಲಿಟ್ಟ ಜಾಗದಲ್ಲಿ ಸ್ವಂತ ಕಟ್ಟಡಕ್ಕೆ ಮುಂಬರುವ ದಿನಗಳಲ್ಲಿ ಭೂಮಿ ಪೂಜೆಯನ್ನು ಏರ್ಪಡಿಸಿ ಕಟ್ಟಡದ ಧನಸಾಹಾಯವನ್ನು ಕೆಎಂಎಫ್ ಹಾಗು ಧರ್ಮಸ್ಥಳ ಸಂಘದಿಂದ ಸಹಾಯವನ್ನು ಹೊಂದಿಸಲು ಅನುವು ಮಾಡಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾರ್ಗ ವಿಸ್ತಾರಣಾಧಿಕಾರಿಗಳಾದ ನಯಾಜ್ ಬೇಗ್ ಹಾಗೂ ಪಶು ವೈದ್ಯರುಗಳಾದ ಡಾ. ನರೇಶ್ಸರ್, ಸತ್ಯನಾರಾಯಣ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರನಾಥ್ ಮತ್ತು ಕಾರ್ಯದರ್ಶಿ ಜನಾರ್ಧನ್ ಮಾಜಿ ಕಾರ್ಯದರ್ಶಿ ಮಹಾಂತೇಶ್ ಮತ್ತು ಸಂಘದ ಸಿಬ್ಬಂದಿ ವರ್ಗ ಗ್ರಾಮಸ್ಥರಾದ ಅಜ್ಜಪ್ಪ ಮತ್ತು ಸಂಘದ ನಿರ್ದೇಶಕರಾದ ಜಯಮ್ಮ ಲಕ್ಷ್ಮಿ ಇವರುಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!