“ಜೀವ ಶಿವಸೇವೆ ಇಂದಿನ ಯುವಜನಾಂಗದ ಆದರ್ಶವಾಗಲಿ”- ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ-ಜೀವ ಶಿವಸೇವೆ ಇಂದಿನ ಯುವಜನಾಂಗದ ಆದರ್ಶವಾಗಲಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಾರದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆಯಡಿಯಲ್ಲಿ ಸ್ವಾಮಿ ಸದಾಶಿವಾನಂದರ ಸ್ಮೃತಿಗಳ ಬಗ್ಗೆ ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ಆರತಿ ಕಾರ್ಯಕ್ರಮ ನಡೆಯಿತು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ, ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಗೀತಾ ವೆಂಕಟೇಶ್ ರೆಡ್ಡಿ, ಯತೀಶ್ ಎಂ ಸಿದ್ದಾಪುರ, ಸುಧಾಮಣಿ, ಸಿ.ಎಸ್.ಭಾರತಿ ಚಂದ್ರಶೇಖರ್,ಶ್ರೀಪಾದ್,ಮಂಜುಳ ಉಮೇಶ್,ಕಾವೇರಿ ಸುರೇಶ್ ಯಾದವ್, ರತ್ನಮ್ಮ ಚೆನ್ನಬಸಪ್ಪ,ಪಂಕಜ ಚೆನ್ನಪ್ಪ, ಚೇತನ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

