ಚಳ್ಳಕೆರೆ :
ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದವರು ಹಾಲು ಉತ್ಪಾದನೆಯಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಆದ್ದರಿಂದ ಮನೆಗೊಂದು ಹಸು ನಾಡಿಗೆ ಹಿತ ಎಂಬಂತೆ
ಹಾಲು ಉತ್ಪಾದನೆ ಮಾಡಬೇಕು ಎಂದು ಶಿಮುಲ್ ಜಿಲ್ಲಾ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.
ಅವರು ತಾಲೂಕಿನ ಎನ್. ದೇವರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024- 25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಸಂಘದ ಅಧ್ಯಕ್ಷರಾದ ಜಿ.ಟಿ. ಶಂಕರ್ ಮೂರ್ತಿ ಅವರ ಘನ ಅಧ್ಯಕ್ಷತೆಯಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ
ಸಂಘದ ಉಪಾಧ್ಯಕ್ಷರಾದ ಪಿ.ವಿ. ಪ್ರಕಾಶ್ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ದಿವಾಕರ ರೆಡ್ಡಿ, ಸಂಘದ ಮಾಜಿ ಅಧ್ಯಕ್ಷರಾದ ಜಿ. ಮಲ್ಲಿಕಾರ್ಜುನ್ ಕಾರ್ಯದರ್ಶಿ ಮಹಂತಣ್ಣ ನಿರ್ದೇಶಕರುಗಳಾದ ಕೆಎಸ್ ಮಲ್ಲಕ್ಕ ಲೋಕೇಶ್ ತಿಪ್ಪೋಜಿ ರಾವ್ ವೆಂಕಟೇಶ್ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಾದ ತಿಮ್ಮಪ್ಪಯ್ಯನಹಳ್ಳಿ. ಹೊಸಹಳ್ಳಿ ಹಾಗೂ ನಾಯಕನಹಟ್ಟಿ ಕಚೇರಿ ಉಪ ವಿಭಾಗ ಅಧಿಕಾರಿಗಳಾದ ಎಂ.ಪುಟ್ಟರಾಜು, ಮಾರ್ಗ ವಿಸ್ತರಣಾಧಿಕಾರಿಗಳಾದ ನಯಾಜ್ ಬೇಗ್, ನಾಯಕನಹಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ವೇತ ರವರು ಕಾರ್ಯದರ್ಶಿ ಪ್ರೇಮ ರಾಜ್ ಮತ್ತು ಆಡಳಿತ ಮಂಡಳಿಯ ಸದಸ್ಯರು ತಿಮ್ಮಪ್ಪಯ್ಯನಹಳ್ಳಿ ಸಂಘದ ಅಧ್ಯಕ್ಷರಾದ ವಿನೋದ ಸ್ವಾಮಿ, ಹಾಗೂ ಕಾರ್ಯದರ್ಶಿ ಜಯಲಕ್ಷ್ಮಿ ಹೊಸಹಳ್ಳಿ ಸಂಘದ ಅಧ್ಯಕ್ಷರಾದ ಕವಿತಾ ಕಾರ್ಯದರ್ಶಿ ಶಿವಗಂಗಮ್ಮ ಸಂಘದ ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಉಪಸ್ಥಿತರಿದ್ದರು.

