filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಕಾಯಕ ಶರಣರ ಜಯಂತಿ ಫೆ.10 ಕ್ಕೆ ತಹಶಿಲ್ದಾರ್ ರೇಹಾನ್ ಪಾಷ ಕರೆ.

ಚಳ್ಳಕೆರೆ : ಅಂದಿನ ಕಾಲದ ಶರಣರ ಮಹತ್ವ ತಿಳಿಯುವ ಮೂಲಕ ಅವರನ್ನು ಜಯಂತಿ ಅಂಗವಾಗಿ ಸ್ಮರಿಸೋಣ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.

ಅವರು ನಗರದ ತಾಲೂಕು ಕಚೇರಿಯಲ್ಲಿ ದಲಿತ ಮುಖಂಡರು, ಸಾಹಿತಿಗಳು, ವಚನಕಾರರ ಸಮ್ಮುಖದಲ್ಲಿ ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವಭಾಸಭೆಯಲ್ಲಿ ಅವರು ಮಾತನಾಡಿದರು.

ಇಂದಿನ ಕಾಲದ ಶಿವಯೋಗಿ ಕಾಯಕ ವಚನ ಸಾಹಿತಿಗಳ ಮೂಲಕ ಜನರಿಗೆ ಜ್ಞಾನವನ್ನು ನೀಡುವಂತಹ ಕಾಯಕಯೋಗಿ ಶರಣರನ್ನು ಇಂದು ನೆನೆಯುವ ಅನಿವಾರ್ಯತೆ ಇದೆ ಆದ್ದರಿಂದ ಫೆಬ್ರವರಿ 10 ರಂದು ಕಾಯಕ ಶರಣರ ಜಯಂತಿಗಳನ್ನು ಆಚರಣೆ ಮಾಡಲಾಗುವುದು, ಅಂದಿನ ಶರಣರ ಜಯಂತಿಯಲ್ಲಿ ಸ್ಥಳೀಯ ಶಾಸಕ ಟಿ. ರಘುಮೂರ್ತಿ ತಾಲೂಕು ಮಟ್ಟದ ಅಧಿಕಾರಿಗಳು, ದಲಿತ ಸಮುದಾಯದ ಮುಖಂಡರು, ಸಾಹಿತಿಗಳು, ವಚನಕಾರರು , ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದಲಿತ ಸಂಚಾಲಕ ಟಿ.ವಿಜಯ್ ಕುಮಾರ್, ಸಾಹಿತಿ ಮೈತ್ರಿ ದ್ಯಾಮಯ್ಯ, ನನ್ನಿವಾಳ ನಾಗರಾಜ್, ಸರ್ಕಾರದ ನಾಮನಿರ್ದೇಶನ ಸದಸ್ಯ ಹಳೆ ನಗರದ ವೀರಭದ್ರಪ್ಪ, ಇನ್ನೂ ಮುಖಂಡರುಗಳು ಸಾರ್ವಜನಿಕರು ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!