ಚಳ್ಳಕೆರೆ : ಒಬ್ಬ ಮನುಷ್ಯನ ಜೀವ ಉಳಿಸುವ ಮಹತ್ವದ ಕಾರ್ಯ ರಕ್ತದಾನ ಮಾಡುವುದು, ಆದ್ದರಿಂದ ಪ್ರತಿಯೊಬ್ಬರು ಸೇವಾ ಮನೋಭಾವ ಹೊಂದಿರಬೇಕು ಎಂದು ಡಿವೈಎಸ್ ಪಿ ಸತ್ಯನಾರಾಯಣ ರಾವ್ ಹೇಳಿದರು.
ಅವರು ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಬಾಲಾಜಿ ಹಾಸ್ಪಿಟಲ್ ನಲ್ಲಿ ಪೋಲೀಸ್ ಇಲಾಖೆವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿದರು,
ಮನುಷ್ಯನ ಜೀವ ಉಳಿಸುವ
ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಲು ಕಾರಣವಾಗುವ ರಕ್ತವನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ’ ಎಂದರು.
ಇನ್ನೂ ನಗರಠಾಣೆಯ ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ ಮಾತನಾಡಿ,
ಸಮಾಜದಲ್ಲಿ ಅನೇಕ ಜಾತಿ ಮತಗಳನ್ನು ಎಣಿಸುತ್ತೇವೆ. ಆದರೆ ಎಲ್ಲರ ರಕ್ತದ ಬಣ್ಣ ಒಂದೇ ಆಗಿದ್ದು ಜಾತಿ ಭೇದವಿಲ್ಲ. ತುರ್ತು ಅಗತ್ಯದ ಸಂದರ್ಭದಲ್ಲಿ ರಕ್ತ ಮುಖ್ಯವಾಗುತ್ತದೆಯೇ ಹೊರತು ಅದು ಯಾವ ಜಾತಿಯವರದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ಎಲ್ಲ ಸಮುದಾಯಗಳ ಜನರು ಸಹೋದರತ್ವ, ಭ್ರಾತೃತ್ವದೊಂದಿಗೆ ಜೀವನ ನಡೆಸಬೇಕು,
ಆರೋಗ್ಯವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವಂತೆ ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಪಿಎಸ್ಐ ಶಿವರಾಜ್, ಹಾಗೂ ಹಲವು ಪೊಲೀಸ್ ಸಿಬ್ಬಂದಿ ವರ್ಗ,ಕಾಲೇಜು ವಿದ್ಯಾರ್ಥಿಗಳು, ಆಟೋಚಾಲಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಇದೇ ಸಂದರ್ಭದಲ್ಲಿ ತಳಕು ವೃತ್ತ ನೀರ ಕಕ್ಷಕ ಮಂಜುನಾಥ್ ಶಿರೆಹಳ್ಳಿ, ಪಿಎಸ್ಐ ಶಿವರಾಜ್, ಈರೇಶ್, ದರೇಪ್ಪ ಬಾಳಪ್ಪ ದೊಡ್ಡಮನಿ, ಇತರ ಸಿಬ್ಬಂದಿ ವರ್ಗದವರು ಬಾಲಾಜಿ ರಕ್ತ ಕೇಂದ್ರದ ಡಾ.ತಿಮ್ಮಣ್ಣ, ಸಿಬ್ಬಂದಿ ವರ್ಗ, ಸಾರ್ವಜನಿಕರು ಇದ್ದರು.

