ಹೊಸದುರ್ಗ: ಬೆಳೆ ಪರಿಹಾರ ಕೊಡಲು ಒತ್ತಾಯಿಸಿ
ಬೀದಿಗಿಳಿದ ರೈತರು
ಹೊಸದುರ್ಗ ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ
ಕೈಕೊಟ್ಟ ಪರಿಣಾಮವಾಗಿ ಶೇ.75ರಷ್ಟು ಬೆಳೆ ನಾಶವಾಗಿದೆ.
ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ, ಇದುವರೆಗೆ ಬೆಳೆ
ಪರಿಹಾರ ಬಿಡುಗಡೆಯಾಗಿಲ್ಲ. ಬೆಳೆ ನಷ್ಟಕ್ಕೆ ಸರ್ಕಾರ ಕೂಡಲೇ
ಮಧ್ಯಂತರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತರು
ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ವರ್ಷ ಅಪಾರ
ಪ್ರಮಾಣದ ಬೆಳೆ ಹಾನಿಯಾಗಿದ್ದು, ಅನೇಕ ರೈತರು ಪರಿಹಾರ
ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.

