ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಚ್. ಏನ್. ಶ್ವೇತಾ ರವಿಕುಮಾರ್ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಈ ಒಂದು ಸಭೆಗೆ ಮುಖ್ಯ ಅತಿಥಿಗಳಾಗಿ ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವಮೂರ್ತಿ ರವರು ಪಾಲ್ಗೊಂಡಿದ್ದರು ಹಾಗೂ ಸಹಾಯಕ ವ್ಯವಸ್ಥಾಪಕರಾದ ಎಂ ಪುಟ್ಟರಾಜು ರವರು ಸಭೆಯಲ್ಲಿ ವಾರ್ಷಿಕ ವಹಿವಾಟಿನ ಸಮಗ್ರ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮಂಜುಳ ಶ್ರೀಕಾಂತ್ ರವರು ಹಾಗೂ ಉಪಾಧ್ಯಕ್ಷರಾದ ಬೋಸಮ್ಮ ರವರು ತಿಪ್ಪೇಸ್ವಾಮಿ ರವರು ಬಿ. ಆರ್. ರವಿಕುಮಾರ್ ಹಾಗೂ ನಾಯಕನಹಟ್ಟಿ ಪಶು ವೈದ್ಯರಾದ ಶ್ರೀಯುತ ಡಾ. ಏನ್. ವಿಜಯಕುಮಾರ್ ರವರು ಹಾಗೂ ಸಂಘದ ಸರ್ವ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಕರಾದ ಶ್ರೀಮತಿ ಬಿ.ಎಂ. ಪ್ರೇಮರಾಜ್ ರವರು ಕುಮಾರ ಏನ್. ಟಿ. ನಾಗರಾಜ್.ಡಿಟಿ.ಯೋಗೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

