ಚಳ್ಳಕೆರೆ :

ಇದೇ ಆಗಸ್ಟ್ 26 ರಂದು ನಡೆಯುವ ಮಧ್ಯಕರ್ನಾಟಕದ ಆರಾಧ್ಯದೈವಿ ಶ್ರೀ
ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳನ್ನು ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಸಿಪಿಐ ಹನುಮಂತಪ್ಪ ಶಿರೆಹಳ್ಳಿ, ಪಿಎ ಸ್ ಐ ತಂಡ ಪರೀಶಿಲನೆ ನಡೆಸಿದರು.

ಇನ್ನೂ ಜಾತ್ರೆ ನಡೆಯುವ ತುಮುಲು ಪ್ರದೇಶದಲ್ಲಿ ಭಕ್ತರಿಗೆ ಸೂಕ್ತ ಬಂದೋಬಸ್ತ ರಕ್ಷಣೆ ಹಾಗೂ ಮೂಲ ಭೂತಸೌಲಭ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು‌

ಇನ್ನೂ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ, ಹಾಗೂ ಸದಸ್ಯ ಶಶಿಕುಮಾರ್ ಪ್ರತಿ ಬಾರಿಗಿಂದ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಆದ್ದರಿಂದ ಯಾವುದೇ ರೀತಿಯಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಮೂಲಭೂತ ಸೌಲಭ್ಯಗಳನ್ನು ಮುಜರಾಯಿ ಇಲಾಖೆ, ತಾಲೂಕು ಆಡಳಿತದಿಂದ ಕಲ್ಪಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಶೌಚಾಲಯ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಈಗೇ ಎಲ್ಲಾ ತರಹದ ಸೌಲಭ್ಯ ಇರುವಂತೆ ಈ ಬಾರಿಯ ಜಾತ್ರೆ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಅಧಿಕಾರಿಗಳ ತಂಡಕ್ಕಾಗೆ ಮನವರಿಕೆ ಮಾಟ್ಟರು‌

ಈ ಸಂದರ್ಭದಲ್ಲಿ ತಾಲೂಕು ತಂಡಾಧಿಕಾರಿಗಳಾದ ರೆಹಮಾನ್ ಪಾಷ ತಳಕು ವೃತ್ತ ನಿರೀಕ್ಷಕರಾದ ಹನುಮಂತಪ್ಪ ಸೀರೆಹಳ್ಳಿ prd ರಾಮಚಂದ್ರ ನಾಯಕ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಓಬಣ್ಣ ತಳಕು ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಗ್ರಾಮ ಪಂಚಾಯಿತಿ ಸದ್ಯರಾದ ಶಶಿಕುಮಾರ ಜಿ ಎಂ, ಈರಣ್ಣ, ಮಲ್ಲಯ್ಯ, ತಿಪ್ಪೇಸ್ವಾಮಿ ವಕೀಲರಾದ ಚಂದ್ರಣ್ಣ ಬಾಬು, ಇತರರು ಇದ್ದರು.

About The Author

Namma Challakere Local News
error: Content is protected !!