ಹಿರಿಯೂರು: ಮೆಕ್ಕೆಜೋಳ ಖರೀದಿಕೇಂದ್ರ
ಆರಂಭಿಸಲು ರೈತರ ಪ್ರತಿಭಟನೆ
ಹಿರಿಯೂರಿನ ನೆಹರು ವೃತ್ತದಲ್ಲಿ ರೈತ ಸಂಘವು ಇಂದು ಪ್ರತಿಭಟನೆ
ನಡೆಸಿದ್ದು, ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೂಡಲೇ
ಆರಂಭಿಸಬೇಕೆಂದು ಒತ್ತಾಯಿಸಿದೆ. ಮೆಕ್ಕೆಜೋಳದ ಬೆಲೆ
ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದರೂ, ಸರ್ಕಾರ ನಿರ್ಲಕ್ಷ್ಯ
ವಹಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರೈತರ
ಸಂಕಷ್ಟ ನಿವಾರಣೆಗೆ ಹಿರಿಯೂರಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ
ಸ್ಥಾಪಿಸುವಂತೆ ಆಗ್ರಹಿಸಿದರು.

